ಮಂಗಳೂರು : ರಾಜ್ಯಾದ್ಯಂತ ನ. 1ರಿಂದ ಹಾಲಿನ ದರ 8 ರೂ. ಏರಿಕೆ ಮಾಡಿ ರಾಜ್ಯ ಸರಕಾರ ಆದೇಶಿಸಿದ್ದು ಫ್ಯಾಟ್ ಆಧಾರದಲ್ಲಿ ದರ ಹೆಚ್ಚಳವಾಗಿರುವುದರಿಂದ ಶುಭಂ ಹಾಲಿನ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬಿದ್ದಿದೆ.
ಶೇ. 3 ಫ್ಯಾಟ್ ಹೊಂದಿರುವ ಟೋನ್ಸ್ ಹಾಲು ಹಾಗೂ ಶೇ. 3.5 ಫ್ಯಾಟ್ ಹೊಂದಿರುವ ಹೋಮೋಜಿನೈಸ್ಟ್ ಹಸುವಿನ ಹಾಲಿಗೆ ಪ್ರತೀ ಲೀಟರ್ಗೆ 6 ರೂ. ನಂತೆ ಏರಿಕೆಯಾಗಿದ್ದು, ಶೆ. 4.5 ಫ್ಯಾಟ್ ಹೊಂದಿರುವ ಶುಭಂ ಹಾಲಿಗೆ ಲೀಟರ್ಗೆ 12 ರೂ. ಹೆಚ್ಚಾಗಿದೆ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹಾಲಿನ ದರ 8 ರೂ. ಹೆಚ್ಚಳ ಮಾಡಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಕೆಎಂಎಫ್ ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳಿಗೆ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ನೀಲಿ ಹಾಗೂ ಹಸುರು ಪ್ಯಾಕೆಟ್ಗಳಲ್ಲಿ ಸಿಗುವ ಹಾಲಿಗೆ ಪ್ರತೀ ಅರ್ಧ ಲೀಟರ್ಗೆ 3 ರೂ. ಹೆಚ್ಚಳವಾಗಿದೆ. ಆದರೆ, ಶುಭಂ ಅರ್ಧ ಲೀಟರ್ಹಾಲಿಗೆ ಹಿಂದೆ ಇದ್ದ 27 ರೂ. ನಿಂದ 32 ರೂ.ಗೆ ಏರಿಕೆಯಾಗಿದೆ. ಇದಕ್ಕೆ ಶುಭಂ ಹಾಲಿನ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಭಂ ಹಾಲನ್ನು ಬಳಸುವ ಮಂಗಳೂರಿನ ಗ್ರಾಹಕ ಎ. ವಿ. ನಾವಡ ಅವರು ಮಾಧ್ಯಮ ಜತೆ ಮಾತನಾಡಿ, ಮುಖ್ಯಮಂತ್ರಿಯವರು ಹಾಲಿನ ದರ 8 ರೂ. ಏರಿಕೆ ಮಾಡುವುದಾಗಿ ಹೇಳಿದ್ದರು. ಆದರೆ, ಶುಭಂ ಹಾಲಿನ ದರವನ್ನು ಅದಕ್ಕಿಂತಲೂ ಹೆಚ್ಚು ಮಾಡಲಾಗಿದೆ. ಮಂಗಳೂರಿನಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಮಾತ್ರವೇ ಸಿಗುತ್ತಿದ್ದು, ಪ್ರತೀ ಪ್ಯಾಕೆಟ್ ದರ ಸುಮಾರು 5 ರೂ. ಹೆಚ್ಚಳವಾಗಿದೆ. ನಿತ್ಯ 2ರಿಂದ 3 ಪ್ಯಾಕೆಟ್ ಹಾಲು ಖರೀದಿಸುವ ನಮಗೆ ಇದರಿಂದ ಸುಮಾರು 10ರಿಂದ 15 ರೂ. ಹೊರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.ನಂದಿನ ಹಾಲಿನ ದರ ಹೆಚ್ಚಳವಾದ ಬಳಿಕ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ಹಿಂದಿನಷ್ಟು ಹಾಲು ಮಾರಾಟವಾಗುತ್ತಿಲ್ಲ ಎಂದು ಮಂಗಳೂರಿನ ಹಾಲು ವ್ಯಾಪಾರಿ ರಘು ಅವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ
ಹಿಂದೆ ಹಾಲಿನ ದರ ಫ್ಯಾಟ್ ಆಧಾರದಲ್ಲಿ ಏರಿಕೆಯಾಗುತ್ತಿರಲಿಲ್ಲ. ಎಲ್ಲ ವಿಧದ ಹಾಲಿಗೂ ಒಂದೇ ರೀತಿಯಲ್ಲಿ ದರ ಹೆಚ್ಚಾಗುತ್ತಿತ್ತು.,ಈ ಬಾರಿ ಫ್ಯಾಟ್ ಆಧಾರದಲ್ಲಿ ಹಾಲಿನ ದರ ಪರಿಷ್ಕರಣೆಯಾಗಿರುವ ಕಾರಣ ಶುಭಂ ಹಾಲಿನ ದರ ಜಾಸ್ತಿಯಾಗಿದೆ. ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಹಸುರು ಹಾಗೂ ನೀಲಿ ಪ್ಯಾಕೆಟ್ ಹಾಲಿಗೆ 6 ರೂ. ಮಾತ್ರವೇ ಏರಿಕೆಯಾಗಿದೆ. ಪರಿಷ್ಕರಣೆಗೆ ಸಂಬಂಧಿಸಿದಂತೆ ಸರಕಾರ ಕೆಎಂಎಫ್ಗೆ ಅಧಿಕಾರ ನೀಡಿದ್ದು,
ದರವನ್ನು ಮೊದಲೇ ಬಿಡುಗಡೆ ಮಾಡಲಾಗಿದೆ.ಎಂದು ಹೇಳಿದ್ದಾರೆ
PublicNext
04/11/2026 12:55 pm