ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ಕಾರು ಡಿಕ್ಕಿ – ಮಹಿಳೆ ಗಂಭೀರ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಸೊಸೈಟಿ ಬಳಿ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಗೊಂಡ ಮಹಿಳೆಯನ್ನು ಮೂಲತಃ ಬಂಟ್ವಾಳದ ನಿವಾಸಿಯಾಗಿದ್ದು, ಪ್ರಸ್ತುತ ಮುಲ್ಕಿಯ ಚಿತ್ರಾಪು ಕಲ್ಸಂಕ ಬಳಿ ವಾಸವಾಗಿರುವ ಕಮಲ (48) ಎಂದು ಗುರುತಿಸಲಾಗಿದೆ.

ಗಾಯಾಳು ಮಹಿಳೆ ಮುಲ್ಕಿಯ ಚರಂತಿಪೇಟೆ ಬಳಿ ಅಂಗಡಿಯೊಂದರಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಕ್ಷೀರಸಾಗರ ಸೊಸೈಟಿ ಬಳಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಮಹಿಳೆ ಸಿನಿಮೀಯ ರೀತಿಯಲ್ಲಿ ಕಾರಿನ ಮುಂಭಾಗಕ್ಕೆ ಹಾರಿದ್ದು, ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ.

ಈ ಘಟನೆಯಲ್ಲಿ ಮಹಿಳೆಯ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅಪಘಾತಕ್ಕೀಡಾದ ಕಾರಿನಲ್ಲೇ ಅವರನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
PublicNext

PublicNext

05/11/2026 07:48 am

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ