ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಹೆದ್ದಾರಿ ಪೊಲೀಸರ ವಾಹನಕ್ಕೆ ಅತಿವೇಗದಿಂದ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಗಡಿಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆ ಶಿರಿಯ ಎಂಬಲ್ಲಿ ನಡೆದಿದೆ.
ಪೊಲೀಸ್ ವಾಹನದಲ್ಲಿದ್ದ ಎಸ್ಸೆ ರಾಘವನ್, ಸಿಬ್ಬಂದಿ ನಿಖಿಲ್ ಮನು, ವಿನು ಹಾಗೂ ಚಾಲಕ ಸುಭಾಷ್ ಗಾಯಗೊಂಡಿದ್ದಾರೆ. ಅವರನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕ ಮಂಗಳೂರು ನಿವಾಸಿ ವಿನೋರಾಜ್ (36) ಕೂಡ ಗಾಯಗೊಂಡಿದ್ದಾರೆ.
ತಲಪಾಡಿಯಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಪೊಲೀಸ್ ಗಸ್ತು ವಾಹನಕ್ಕೆ, ಮಂಗಳೂರು ಕಡೆಯಿಂದ ಕುಂಬಳೆಯತ್ತ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಪೊಲೀಸ್ ವಾಹನದ ಹಿಂಭಾಗದ ಒಂದು ಪಾರ್ಶ್ವ ಹಾಗೂ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
04/11/2026 09:59 am
LOADING...