ಬ್ರಹ್ಮಾವರ: ಚಾಂತಾರು ಗ್ರಾಮ ಪಂಚಾಯತ್ 2026-27ನೇ ಸಾಲಿನ ಪ್ರಥಮ ಗ್ರಾಮಸಭೆ ಪಂಚಾಯತ್ ಆಡಳಿತಾಧಿಕಾರಿ ಪಶುವೈದ್ಯ ಡಾ. ಉದಯ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಚಾಂತಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಸಾರ್ವಜನಿಕವಾಗಿ ನಡೆದ ಅನೇಕ ಸಮಸ್ಯೆಯಲ್ಲಿ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಫೋನ್ ಕರೆ ಮಾಡಿದರೆ ಅದಕ್ಕೆ ಪ್ರತಿಕ್ರಿಯೆ ಇರುವುದಿಲ್ಲ. ಆ ಕುರಿತು ಒಂದು ಬಾರಿ ಸ್ಥಳದಲ್ಲಿಯೇ ಇದ್ದು ಫೋನ್ ಕರೆ ಮಾಡಿದಾಗಲೂ ಅಲ್ಲಿದ್ದವರು ಅವರದೇ ಮಾತುಕತೆಯಲ್ಲಿ ನಿರತರಾಗಿದ್ದಾರೆಯೇ ಹೊರತು ಫೋನ್ ರಿಸೀವ್ ಮಾಡುತ್ತಿಲ್ಲ. ಚಿಕ್ಕಹುಡುಗಿಗೆ ಆರೋಗ್ಯ ತಪಾಸಣೆ ಸಂದರ್ಭ ರಕ್ತ ಪರೀಕ್ಷೆ ಮಾಡುವಾಗ ರಕ್ತಸ್ರಾವವಾಗಿದೆ ಎಂದು ಗ್ರಾಮಸ್ಥರೋರ್ವರು ಆರೋಗ್ಯ ಅಧಿಕಾರಿಯವರ ಗಮನ ಸೆಳೆದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ,ಕಂದಾಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಚಾಂತಾರು ಗ್ರಾಮಪಂಚಾಯತಿ ಮಾಜಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಸಿಬ್ಬಂದಿ, ಗ್ರಾಮಸ್ಥರು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
PublicNext
04/11/2026 10:27 pm
LOADING...