ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಗೋಕರ್ಣ ಕಡಲಬ್ಬರಕ್ಕೆ ಬಲಿಯಾದ ಬೆಂಗಳೂರಿನ ಯುವಕನ ಶವ ಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬನಶಶಿ ಕಡಲತೀರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಬೆಂಗಳೂರಿನ 24 ವರ್ಷದ ಯುವಕನ ಮೃತದೇಹ ಪತ್ತೆಯಾಗಿದೆ. ಸೋಮವಾರ ಮುಂಜಾನೆ ಸುಮಾರು 1.45ರ ವೇಳೆಗೆ ಬೀಚ್ ಸಮೀಪ ಶವ ಪತ್ತೆಯಾಗಿದ್ದು, ಹಲವು ಗಂಟೆಗಳ ಶೋಧ ಕಾರ್ಯಾಚರಣೆಗೆ ತೆರೆ ಬಿದ್ದಿದೆ.

ನವೆಂಬರ್ 1ರಂದು ಬೆಳಿಗ್ಗೆ ಸುಮಾರು 7.30ರ ಹೊತ್ತಿಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ತಂಡದ ಮೇಲೆ ಭಾರಿ ಅಲೆಗಳು ಅಪ್ಪಳಿಸಿದ್ದವು. ಈ ವೇಳೆ ಹಲವರು ನೀರಿನ ಸೆಳೆತಕ್ಕೆ ಸಿಲುಕಿದ್ದರು. ಘಟನೆಯಲ್ಲಿ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಕೆಲವರನ್ನು ರಕ್ಷಿಸಲಾಗಿತ್ತು. ಆದರೆ, ಬೆಂಗಳೂರಿನ ಬಾಬುಸಾಪಾಳ್ಯ ನಿವಾಸಿ ವಿಶ್ವೇಶ್ ಎ.ಕೆ. (24) ನಾಪತ್ತೆಯಾಗಿದ್ದರು.

ವಿಶ್ವೇಶ್‌ಗಾಗಿ ಗೋಕರ್ಣ ಪೊಲೀಸರು, ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯರು ಜಂಟಿಯಾಗಿ ಶೋಧ ನಡೆಸುತ್ತಿದ್ದರು. ನಿರಂತರ ಕಾರ್ಯಾಚರಣೆಯ ಬಳಿಕ ಸೋಮವಾರ ಮುಂಜಾನೆ ಅವರ ಮೃತದೇಹ ಪತ್ತೆಯಾಗಿದೆ. ಮೃತರು ಆನಂದ ಕುಲಾಲ್ ಅವರ ಪುತ್ರ ಎಂದು ತಿಳಿದುಬಂದಿದೆ.

ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

02/11/2026 11:49 am

Cinque Terre

5.09 K

Cinque Terre

0

ಸಂಬಂಧಿತ ಸುದ್ದಿ