ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕನ್ನಡ ಭಾಷಾ ಉತ್ಸವದ ಕಳೆಗುಂದಿಸುತ್ತಿದೆಯೇ ಆಂಗ್ಲ ಭಾಷಾ ವ್ಯಾಮೋಹ?

ಬ್ರಹ್ಮಾವರ: ನವೆಂಬರ್ 1 ರಂದು ಕರ್ನಾಟಕ ರಾಜ್ಯ ಉದಯವಾದ ಸಂಭ್ರಮಕ್ಕೆ ರಾಜ್ಯದಲ್ಲಷ್ಟೇ ಅಲ್ಲದೆ ದುಬೈ, ಮುಂಬೈ, ದೆಹಲಿ ಸೇರಿದಂತೆ ಹಲವೆಡೆ ಕರ್ನಾಟಕ ಸಂಘಗಳು ಸ್ಥಾಪನೆಯಾಗಿ, ಕನ್ನಡ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸಲಾಗುತ್ತಿತ್ತು. ಆದರೆ ಇಂದು ರಾಜ್ಯದಲ್ಲಿಯೇ ಕನ್ನಡ ಭಾಷಾ ಪ್ರೇಮ ಕಡಿಮೆಯಾಗಿ, ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿರುವುದರಿಂದ ನಾಡು-ನುಡಿಯ ಈ ಸಂಭ್ರಮ ಕಣ್ಮರೆಯಾಗುವ ಹಂತಕ್ಕೆ ತಲುಪಿರುವುದು ಕಂಡುಬರುತ್ತಿದೆ.

ಭಾನುವಾರ ಬ್ರಹ್ಮಾವರದಲ್ಲಿ ತಾಲೂಕು ಆಡಳಿತ, ಅಜಪುರ ಕರ್ನಾಟಕ ಸಂಘ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲೆಗಳ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ತಾಯಿ ಭುವನೇಶ್ವರಿ ದೇವಿಯ ಸ್ತಬ್ಧಚಿತ್ರ, ಚಂಡೆ ವಾದನ ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಸಾಗಿ, ಬಳಿಕ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಸಂಘಟಕರು, ಕೆಲವು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರು. "ಆಚರಣೆಯು ಕೇವಲ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾದಂತಾಗಿದೆ" ಎಂದು ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಬ್ರಹ್ಮಾವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಉಪಾಧ್ಯಾಯ ಮಾತನಾಡಿ, "ಮಾತೃಭಾಷಾ ಶಿಕ್ಷಣಕ್ಕೆ ಸೂಕ್ತ ಮಾನ್ಯತೆ ಸಿಗದಿರುವುದೇ ಇಂತಹ ಪರಿಸ್ಥಿತಿಗೆ ಮುಖ್ಯ ಕಾರಣ" ಎಂದು ಕಳವಳ ವ್ಯಕ್ತಪಡಿಸಿದರು.

ಅಲ್ಲದೆ, ಆಮಂತ್ರಣ ಪತ್ರಿಕೆ ಹಾಗೂ ಸಭಾ ಕಾರ್ಯಕ್ರಮದ ಬ್ಯಾನರ್‌ನಲ್ಲಿ 'ಕನ್ನಡ ರಾಜ್ಯೋತ್ಸವ' ಎಂಬ ಹೆಸರನ್ನೇ ಮುದ್ರಿಸದಿರುವುದು ಕಂಡುಬಂದಿದ್ದು, ಸಂಘಟಕರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ.

- ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ

Edited By :
PublicNext

PublicNext

02/11/2026 07:30 pm

Cinque Terre

8.14 K

Cinque Terre

0

ಸಂಬಂಧಿತ ಸುದ್ದಿ