ಹುಬ್ಬಳ್ಳಿ: ಕಳೆದ ಒಂದು ತಿಂಗಳಿಂದ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ಐದುವರೆ ಸಾವಿರ ನಿಗದಿಗಾಗಿ ಆಗ್ರಹಿಸಿ ಹೋರಾಟ ನಡೆಸುತ್ತಲೇ ಇದ್ದಾರೆ. ಆದ್ರೆ ಇಲ್ಲಿವರಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸಕ್ಕರೆ ಪ್ಯಾಕ್ಟರಿಗಳು ಆರಂಭವಾಗಿಲ್ಲ ಮತ್ತೊಂದಡೆ ಕಟಾವಿಗೆ ಬಂದಿದ್ದ ಕಬ್ಬು ಒಣಗಲು ಆರಂಭಿಸಿದೆ. ಇದು ರೈತರಿಗೆ ಮತ್ತೊಂದು ಆತಂಕವನ್ನು ಹೆಚ್ಚಿಸಿದೆ..
ಒಣಗುತ್ತಿರೋ ಕಬ್ಬು ಇದೇ ಕಬ್ಬನ್ನು ಹಿಡಿದು ದಯವಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ನೆರವಿಗೆ ಬರಬೇಕು. ಆದಷ್ಟು ಬೇಗನೆ ಬೆಲೆ ನಿಗದಿ ಮಾಡಿ, ಪ್ಯಾಕ್ಟರಿ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಅಂತ ರೈತರು ಮನವಿ ಮಾಡ್ತಿರೋ ರೈತರು.
ಹೌದು.. ಇದೀಗ ಕಬ್ಬು ಬೆಳೆಗಾರರಿಗೆ ಕಬ್ಬು ಬಿಸಿ ತುಪ್ಪವಾದಂತಾಗಿದೆ. ಕಟಾವು ಮಾಡಲಿಕ್ಕೂ ಆಗದೇ, ಹಾಗೆ ಬಿಡಲಿಕ್ಕೂ ಆಗದೇ ಪರದಾಡುವಂತಾಗಿದೆ. ಒಂದೆಡೆ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಕಳೆದ ಒಂದು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ ಐದುವರೆ ಸಾವಿರ ನಿಗದಿಯಾಗಬೇಕು ಅಂತ ಆಗ್ರಹಿಸುತ್ತಿದ್ದಾರೆ. ಆದ್ರೆ ಇಲ್ಲಿವರಗೆ ಬೆಲೆ ನಿಗದಿಯಾಗಿಲ್ಲಾ. ಹೀಗಾಗಿ ರೈತರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಬೆಲೆ ನಿಗದಿಯಾಗೋವರಗೆ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ರೈತರು ಅವಕಾಶ ನೀಡ್ತಿಲ್ಲ. ಇನ್ನು ಧಾರವಾಡ ಜಿಲ್ಲೆಯ ರೈತರು ಕೂಡಾ ಕಬ್ಬಿನ ಹೋರಾಟಕ್ಕೆ ಬೆಂಬಲ ನೀಡಿದ್ದು,ಹೋರಾಟ ಮಾಡುತ್ತಲೇ ಇದ್ದಾರೆ. ಆದ್ರೆ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ, ರಾಮನಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹೆಚ್ಚಿನ ರೈತರು ಕಬ್ಬು ಬೆಳೆದಿದ್ದಾರೆ.ಆದ್ರೆ ಕಳೆದ ಒಂಭತ್ತು ತಿಂಗಳಿಂದ ಮಕ್ಕಳಂತೆ ಜೋಪಾನ ಮಾಡಿ ಬೆಳಸಿದ್ದ ಕಬ್ಬು ಇದೀಗ ರೈತರ ಮುಂದೆ ಒಣಗಲು ಆರಂಭವಾಗಿದೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ.
ಒಂದಡೆ ರೈತರೆ ಬೆಲೆ ನಿಗದಿಯಾಗೋವರಗೆ ಫ್ಯಾಕ್ಟರಿ ಆರಂಭ ಮಾಡಬಾರದು ಅಂತ ಪಟ್ಟು ಹಿಡದಿದ್ದಾರೆ. ಹೀಗಾಗಿ ಅಕ್ಟೋಬರ್ ನಲ್ಲಿ ಆರಂಭವಾಗಬೇಕಿದ್ದ ಸಕ್ಕರೆ ಕಾರ್ಖಾನೆಗಳು ನವಂಬರ್ ಬಂದ್ರು ಆರಂಭವಾಗಿಲ್ಲಾ. ಆದ್ರೆ ಇದೇ ಸಮಯದಲ್ಲಿ ಸಕಾಲದಲ್ಲಿ ಕಬ್ಬು ಕಟಾವು ಮಾಡದೇ ಇದ್ರೆ ಕಬ್ಬು ಒಣಗುತ್ತದೆ. ನಂತರ ಅದನ್ನು ಕಟಾವು ಮಾಡಿದ್ರು ಕೂಡಾ ನಿರೀಕ್ಷಿತ ಇಳುವರಿ ಬರೋದಿಲ್ಲಾ. ಒಣಗಿದ ಮೇಲೆ ಮಾರಟ ಮಾಡೋದು ಕೂಡಾ ಕಷ್ಟ. ಹೀಗಾಗಿ ಕಬ್ಬು ಬೆಳೆದ್ರು ಲಾಭವಾಗಲಾರದು ಅನ್ನೋ ಆತಂಕ ಕಾಡುತ್ತಿದೆ. ಇನ್ನು ಈ ಬಾರಿ ಸರಿಯಾಗಿ ಮಳೆಯಾಗದೇ ಇರೋದರಿಂದ ನೀರು ಹಾಯಿಸಲು ಕಷ್ಟವಾಗಿದೆ. ಅದರಲ್ಲೂ ವಿದ್ಯುತ್ ಪೂರೈಕೆ ಸರಿಯಾಗಿ ಇಲ್ಲದೇ ಇರೋದರಿಂದ ನೀರು ಹಾಯಿಸಲು ಆಗ್ತಿಲ್ಲಾ. ಮತ್ತೊಂದಡೆ ಬಿಸಿಲು ಕೂಡಾ ಹೆಚ್ಚಾಗಿದೆ. ಹೀಗೆ ಬಿಟ್ರೆ ಕೆಲವೇ ದಿನಗಳಲ್ಲಿ ಕಬ್ಬು ಒಣಗುತ್ತದೆ ಅಂತ ರೈತರು ನೋವು ತೋಡಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗನೆ ಸರ್ಕಾರ ಪ್ರತಿ ಟನ್ ಕಬ್ಬಿಗೆ ಐದುವರೆ ಸಾವಿರ ನಿಗದಿ ಮಾಡಬೇಕು. ಕಬ್ಬು ಕಟಾವು ಮತ್ತು ಪ್ಯಾಕ್ಟರಿ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಅಂತ ಆಗ್ರಹಿಸಿದ್ದಾರೆ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/11/2026 04:17 pm