ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರಕು ಸಾಗಣೆಯಲ್ಲಿ ನೈಋತ್ಯ ರೈಲ್ವೆ ದಾಖಲೆ: 928 ಕೋಟಿ ಆದಾಯ..!

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಅಕ್ಟೋಬರ್‌ನಲ್ಲಿ 5.5 ಮಿಲಿಯನ್ ಟನ್ (ಎಂಟಿ) ಸರಕುಗಳನ್ನು ಸಾಗಿಸಿದ್ದು, ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ ಸಾಗಿಸಿದ 4.2 ಮಿಲಿಯನ್ ಟನ್‌ಗೆ ಹೋಲಿಸಿದರೆ ಶೇ.31ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ. ನೈಋತ್ಯ ರೈಲ್ವೆ ವಲಯ ರಚನೆಯಾದ ನಂತರ ಒಂದು ತಿಂಗಳ ಅವಧಿಯಲ್ಲಿ ದಾಖಲಾದ ಅತ್ಯಧಿಕ ಸರಕು ಸಾಗಣೆಯಾಗಿದೆ.

ಅಕ್ಟೋಬರ್‌ನಲ್ಲಿ ಕಲ್ಲಿದ್ದಲು ಸಾಗಣೆ 0.80 ಎಂಟಿನಿಂದ 1.37 ಎಂಟಿಗೆ ಏರಿಕೆಯಾಗಿ, ಶೇ.71ರಷ್ಟು ಬೆಳವಣಿಗೆಯೊಂದಿಗೆ ಸರ್ವಕಾಲಿಕ ಮಾಸಿಕ ದಾಖಲೆ ನಿರ್ಮಿಸಿದೆ. ಕಬ್ಬಿಣ ಮತ್ತು ಸಿದ್ಧ ಉಕ್ಕಿನ ಸಾಗಣೆ 0.88 ಎಂಟಿನಿಂದ 1.10 ಎಂಟಿಗೆ, ಖನಿಜ ತೈಲ ಸಾಗಣೆ 0.17 ಎಂಟಿನಿಂದ 0.23 ಎಂಟಿಗೆ, ರಸಗೊಬ್ಬರ ಸಾಗಣೆ 0.12 ಎಂಟಿನಿಂದ 0.15 ಎಂಟಿಗೆ ಹಾಗೂ ಕಂಟೇನರ್ ಸಾಗಣೆ 0.07 ಎಂಟಿನಿಂದ 0.10 ಎಂಟಿಗೆ ಹೆಚ್ಚಳವಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ನೈಋತ್ಯ ರೈಲ್ವೆಯು ಒಟ್ಟು 31.56 ಎಂಟಿ ಸರಕು ಸಾಗಿಸಿದ್ದು, ಹಿಂದಿನ ವರ್ಷದ ಇದೇ ಅವಧಿಯ 28.82 ಎಂಟಿಗೆ ಹೋಲಿಸಿದರೆ ಶೇ.9.5ರಷ್ಟು ಬೆಳವಣಿಗೆ ದಾಖಲಿಸಿದೆ. ನೈಋತ್ಯ ರೈಲ್ವೆಯು ಅಕ್ಟೋಬರ್‌ನಲ್ಲಿ 928 ಕೋಟಿ ರೂ. ಒಟ್ಟು ಆದಾಯ ಗಳಿಸಿದ್ದು, ಹಿಂದಿನ ವರ್ಷದ ಇದೇ ತಿಂಗಳಿನ 773 ಕೋಟಿ ರೂ.ಗೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಿನ ಪ್ರಗತಿ ಸಾಧಿಸಿದೆ.

ಅಕ್ಟೋಬರ್‌ನಲ್ಲಿ ಪ್ರಯಾಣಿಕರ ಆದಾಯ ಶೇ.19ರಷ್ಟು ಹೆಚ್ಚಳದೊಂದಿಗೆ 358 ಕೋಟಿ ರೂ.ಗೆ ತಲುಪಿದೆ. ಸರಕು ಸಾಗಣೆ ಆದಾಯ ಶೇ.22ರಷ್ಟು ಏರಿಕೆಯಾಗಿ 524 ಕೋಟಿ ರೂ.ಗೆ ತಲುಪಿದೆ. ಪಾರ್ಸೆಲ್ ಆದಾಯ ಶೇ.21ರಷ್ಟು ಹೆಚ್ಚಳದೊಂದಿಗೆ 17 ಕೋಟಿ ರೂ. ಆಗಿದೆ. ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ನೈಋತ್ಯ ರೈಲ್ವೆಯು ಒಟ್ಟು 5,620 ಕೋಟಿ ರೂ. ಆದಾಯ ಗಳಿಸಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ 5,282 ಕೋಟಿ ರೂ.ಗೆ ಹೋಲಿಸಿದರೆ ಶೇ.6.4ರಷ್ಟು ಬೆಳವಣಿಗೆ ದಾಖಲಿಸಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/11/2026 01:31 pm

Cinque Terre

7.94 K

Cinque Terre

0

ಸಂಬಂಧಿತ ಸುದ್ದಿ