ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಜಾರ ಸಮುದಾಯಕ್ಕೆ ನಿವೇಶನ ಹಂಚಿಕೆ: ನ. 4ರಂದು ಕಾರ್ಯಕ್ರಮ

ಗದಗ: ಬಂಜಾರ ಸಮುದಾಯದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನವೆಂಬರ್ 4ರಂದು ಪಟ್ಟಣದ ದೊಡ್ಡೂರು ರಸ್ತೆ ಬಂಜಾರ ಕಾಲೋನಿಯಲ್ಲಿ ನಿವೇಶನ ಹಂಚಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಪ್ರದೇಶ ಲಮಾಣಿ ಬಂಜಾರ ಶ್ರೀ ಸೇವಾಲಾಲ್ ಕಲ್ಯಾಣ ಸಂಘ (ರಿ.) ಬೆಂಗಳೂರು ಹಾಗೂ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳ ಲಮಾಣಿ ಬಂಜಾರ ಜಾಂಬಿ ಸಂಘದ ಆಶ್ರಯದಲ್ಲಿ ಬುಧವಾರ ಬೆಳಿಗ್ಗೆ 10:45ಕ್ಕೆ ಕಾರ್ಯಕ್ರಮ ಜರುಗಲಿದೆ.

ರಾಮಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಜಾರ ಸಮುದಾಯದ ಜನರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಆರ್.ಎಸ್. ನಂ. 82/1 ಮತ್ತು 82/5ರಲ್ಲಿರುವ ಒಟ್ಟು 4 ಎಕರೆ 29 ಗುಂಟೆ ಜಮೀನಿನಲ್ಲಿ ನಿವೇಶನಗಳನ್ನು ರೂಪಿಸಲಾಗಿದೆ. 9×12 ಮೀಟರ್ ಅಳತೆಯ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಶ್ರೀ ಶ್ರೀಶ್ರೀ ಮಹಾನ್ ತಪಸ್ವಿ ಡಾ. ಕುಮಾರ ಮಹಾರಾಜರು, ಶ್ರೀ ಸದ್ದೂರು ಶಿವಯೋಗಿ ವಾಗೀಶ ಪಂಡಿತಾರಾಧ್ಯ ಹಾಲಶಿವಯೋಗಿಗಳು ಹಾಗೂ ಶ್ರೀ ಪರಮಹಂಸ ಗೋರಸಾಯಿ ಬಾಬಾ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಶಾಸಕ ಚಂದ್ರು ಕೆ. ಲಮಾಣಿ ಅಧ್ಯಕ್ಷತೆ ವಹಿಸಲಿದ್ದು, ರುದ್ರಪ್ಪ ಲಮಾಣಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಂಗಣ್ಣ ಎಂ. ಮಹಾಂತಶೆಟ್ಟರ, ಜಿ.ಎಸ್. ಗದ್ದಿಲಿಂಗದೇವರಮಠ, ರಾಮಣ್ಣ ಎಸ್. ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಭಾಗವಹಿಸಲಿದ್ದಾರೆ.

ದೀಪಕ್ ಗು. ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಸೋಮನಾಥ ಲ. ಲಮಾಣಿ, ಗಣೇಶ ಗೋ. ಲಮಾಣಿ ಹಾಗೂ ಶೇಖಪ್ಪ ಜಾ. ಲಮಾಣಿ ಸ್ವಾಗತಿಸಲಿದ್ದಾರೆ.

ಬಂಜಾರ ಸಮುದಾಯದ ಜನರಿಗೆ ಸ್ವಂತ ನಿವೇಶನ ಕಲ್ಪಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

03/11/2026 04:38 pm

Cinque Terre

740

Cinque Terre

0

ಸಂಬಂಧಿತ ಸುದ್ದಿ