ಬಾಗಲಕೋಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬಾಗಲಕೋಟೆ ಯೋಜನಾ ಕಚೇರಿಯಲ್ಲಿ ನ.2ರಂದು ಜ್ಞಾನದೀಪ ಶಿಕ್ಷಕರಿಗೆ ಉಡುಗೊರೆ ವಿತರಣೆ ಹಾಗೂ ಶಿಷ್ಯವೇತನ ಮಂಜೂರಾದ ವಿದ್ಯಾರ್ಥಿಗಳಿಗೆ ಮಂಜುನಾಥ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜ್ಞಾನದೀಪ ಶಿಕ್ಷಕರಿಗೆ ಗೌರವಾರ್ಥವಾಗಿ ಉಡುಗೊರೆಗಳನ್ನು ವಿತರಿಸಲಾಯಿತು. ಶಿಷ್ಯವೇತನ ಮಂಜೂರಾದ ವಿದ್ಯಾರ್ಥಿಗಳಿಗೆ ಮಂಜುನಾಥ ಪತ್ರಗಳನ್ನು ವಿತರಿಸಿ, ಶಿಕ್ಷಣದ ಮಹತ್ವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಯೋಜನೆಯು ನೀಡುತ್ತಿರುವ ಪ್ರೋತ್ಸಾಹದ ಕುರಿತು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ನಿರ್ದೇಶಕ ಚನ್ನಕೇಶವ, ಬಾಗಲಕೋಟೆ ಜಿಲ್ಲಾ ಜನಜಾಗೃತಿ ವೇದಿಕೆಯ ಪೂರ್ವ ಅಧ್ಯಕ್ಷ ರವೀಂದ್ರ ಒಂಟಕುದುರೆ ಹಾಗೂ ಬಾಗಲಕೋಟೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಬಸವರಾಜ್ ಉಪಸ್ಥಿತರಿದ್ದರು.
Kshetra Samachara
03/11/2026 05:09 pm
LOADING...