ಬಾಗಲಕೋಟೆ: ಬಾಗಲಕೋಟೆ ನವನಗರ ಜನರಿಗೆ ವಿಷಪೂರಿತ ಗಾಳಿ ದಟ್ಟ ಹೊಗೆ ಸಮಸ್ಯೆ ಆವರಿಸಿತ್ತು. ಸಾಕಷ್ಟು ದಿನಗಳಿಂದ ಜನ ಸಮಸ್ಯೆ ಅನುಭವಿಸುತ್ತಾ ಇದ್ರು. ಈಗ ಸ್ವತಃ ಮುಂದೆ ನಿಂತು ಬೆಂಕಿ ನಂದಿಸಿ ಹೊಗೆ ತಡೆಯುವ ಕಾರ್ಯಾಚರಣೆ ಬಿಡಿಟಿಎ ಅಧ್ಯಕ್ಷ
ಪ್ರಕಾಶ್ ತಪಶೆಟ್ಟಿ ಮಾಡ್ತಾ ಇದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಬಿಟಿಡಿಎ ಸಿಬ್ಬಂದಿ ಕಾರ್ಯಾಚರಣೆ ನಡೆಯುತ್ತಿದೆ. ತ್ಯಾಜ್ಯ ಸುಟ್ಟ ಹೊಗೆಯಿಂದ ನಿತ್ಯ ಜನರಿಗೆ ಸಮಸ್ಯೆ ಆಗಿತ್ತು.
ನವನಗರ ಹಾಗೂ ವಿದ್ಯಾಗಿರಿಯಲ್ಲಿ ಆವರಿಸುತ್ತಿದ್ದ ದುರ್ನಾತದ ಹೊಗೆ ಆರೋಗ್ಯ ಸಮಸ್ಯೆ ಉಂಟು ಮಾಡಿತ್ತು.60 ಸಾವಿರಕ್ಕೂ ಹೆಚ್ಚು ಜನರು ವಾಸಿಸುವ ನಗರದಲ್ಲಿ ಹೊಗೆಯ ಸಮಸ್ಯೆ ದೊಡ್ಡದಾಗಿತ್ತು. ಎಸ್‌ಟಿಪಿ ಬಳಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊಗೆ ಬರುತ್ತಿತ್ತು.ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ರು.ವಾರದಲ್ಲಿ ಎರಡೂ ಮೂರು ಬಾರಿ ಹೊತ್ತಿಕೊಳ್ಳುತ್ತಿದ್ದ ಬೆಂಕಿ ಆರಿಸುತ್ತಾ ಇರಲಿಲ್ಲ.
ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದ್ರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಅಂತೂ ಇಂತೂ ಹಲವು ಸಲ ಮನವಿ ಬಳಿಕ ಈಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
PublicNext
31/10/2026 07:58 am
LOADING...