ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತರ ಹೋರಾಟಕ್ಕೆ ಜೈನ ಮುನಿಗಳ ಬೆಂಬಲ; 13 ದಿನಗಳಿಂದ ಉಪವಾಸ

ರಬಕವಿ-ಬನಹಟ್ಟಿ : ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಜೈನ ಮುನಿ ಕುಲರತ್ನ ಭೂಷಣ ಮಹಾರಾಜರು ಕಳೆದ 13 ದಿನಗಳಿಂದ ಉಪವಾಸ ವ್ರತ ಕೈಗೊಂಡಿದ್ದಾರೆ.

ಅನ್ನದಾತನಿಗೆ ಬೆಂಬಲ ಬೆಲೆ ನೀಡಿ, ಅನ್ನದಾತನಿಲ್ಲದೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಮುನಿಗಳು ಸಾರುತ್ತಿದ್ದಾರೆ.

ನಿರಂತರವಾಗಿ ನೀರು ಮತ್ತು ಆಹಾರ ತ್ಯಜಿಸಿದ್ದ ಮುನಿಗಳು ಕಳೆದ ಎರಡು ದಿನಗಳಿಂದ ಎಳನೀರು ಮಾತ್ರ ಸೇವಿಸುತ್ತಿದ್ದಾರೆ. ಕುಲರತ್ನ ಭೂಷಣ ಮಹಾರಾಜರ ಉಪವಾಸ ಹೋರಾಟಕ್ಕೆ ಮಹಿಳೆಯರು ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಉಪವಾಸದ ನಡುವೆಯೂ ಮುನಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಭಕ್ತರು ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

01/11/2026 03:14 pm

Cinque Terre

7.12 K

Cinque Terre

0

ಸಂಬಂಧಿತ ಸುದ್ದಿ