ಹೊಸಪೇಟೆ : ವಿಜಯನಗರ ಜಿಲ್ಲೆಯಾಗಿ 6 ವರ್ಷ ಕಳೆದರೂ ಜಿಲ್ಲೆಗೆ ಒಂದೇ ಒಂದು ಮಹಿಳಾ ಪೊಲೀಸ್ ಠಾಣೆ ಇಲ್ಲದಂತಹ ದುಸ್ಥಿತಿ ನಿರ್ಮಾಣ ಆಗಿದೆ. ಜೊತೆಗೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದ್ದರೂ ಜಿಲ್ಲೆಯಲ್ಲಿ CEN ಪೊಲೀಸ್ ಠಾಣೆ ಇಲ್ಲದಂತಾಗಿದೆ. ಆನ್‌ಲೈನ್ ವಂಚನೆಗೊಳಗಾದವರು ನ್ಯಾಯಕ್ಕಾಗಿ ಬಳ್ಳಾರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಲಕ್ಷಾಂತರ ರೂಪಾಯಿ ಆನ್‌ಲೈನ್‌ನಲ್ಲಿ ಕಳೆದುಕೊಂಡರೂ ಸ್ಥಳೀಯ ಪೊಲೀಸ್ ಠಾಣೆಗಳೇ ಸಂತ್ರಸ್ತರಿಗೆ ಆಸರೆ ಆಗಿವೆ. ಆದ್ರೆ ಸೈಬರ್ ಅಪರಾಧಗಳ ತನಿಖೆಗೆ ಪ್ರತ್ಯೇಕ ಠಾಣೆ ಇಲ್ಲದೇ ಸ್ಥಳೀಯ ಪೊಲೀಸರಿಗೆ ಹೊರೆ ಹೆಚ್ಚಾಗಿದೆ. ಇದ್ರ ಮಧ್ಯೆ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಯೂ ಇಲ್ಲದಂತಾಗಿದೆ. ಸಾಮಾನ್ಯ ಪೊಲೀಸ್ ಠಾಣೆಗಳಲ್ಲೇ ಮಹಿಳೆಯರ ಪ್ರಕರಣಗಳ ನಿರ್ವಹಣೆ – ಪ್ರತ್ಯೇಕ ಠಾಣೆ ಬೇಕೆಂಬ ಬೇಡಿಕೆ ಬಹಳ ದಿನದಿಂದಲೂ ಇದೆ. ಮಹಿಳೆಯರಿಗೆ ಸುಲಭವಾಗಿ ದೂರು ಸಲ್ಲಿಸಿ ನ್ಯಾಯ ಪಡೆಯಲು ಮಹಿಳಾ ಪೊಲೀಸ್ ಠಾಣೆ ಅಗತ್ಯ ಇದೆ. ಜಿಲ್ಲೆಯಾಗಿ ಆರು ವರ್ಷ ಕಳೆದರೂ ಮೂಲ ಪೊಲೀಸ್ ಸೌಲಭ್ಯಗಳಿಗಾಗಿ ವಿಜಯನಗರ ಜನತೆ ಕಾಯುತ್ತಿದೆ.
ವಿಜಯನಗರ ಜಿಲ್ಲೆಯಲ್ಲಿ ಇಷ್ಟೆಲ್ಲ ಜ್ವಲಂತ ಸಮಸ್ಯೆಗಳಿದ್ದಾವೆ. ಗೃಹರಾಜ್ಯದಲ್ಲಿ ಗೃಹ ಇಲಾಖೆ ವ್ಯಾಪ್ತಿಯ ಯಾವ ಜಿಲ್ಲೆಯಲ್ಲಿ ಏನ್ ಸಮಸ್ಯೆ ಇದೆ ಅಂತ ಗಮನ ಹರಿಸೋದನ್ನ ಬಿಟ್ಟು, ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ಬಗ್ಗೆ ಟೀಕೆ ಮಾಡೋದು, ವಿಪಕ್ಷಗಳ ಪ್ರತಿಪಕ್ಷಗಳ ಟೀಕೆ ಮಾಡೋದನ್ನ ಬಿಟ್ಟು ತಮ್ಮ ಇಲಾಖೆಯಲ್ಲಿರೋ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲಿ ಅನ್ನೋದು ವಿಜಯನಗರ ಜಿಲ್ಲೆಯ ಪ್ರಜ್ಞಾವಂತರ ಮಾತು.
PublicNext
03/11/2026 05:37 pm
LOADING...