ಶಿರಸಿ: ಜುಲೈ ತಿಂಗಳ ಹಾಲಿನ ರೂ.5 ಪ್ರೋತ್ಸಾಹಧನ ನ.2ರಂದು 2026-2027 ನೇ ಸಾಲಿನಲ್ಲಿ ಜುಲೈ ಮಾಹೆಯ ವರೆಗೆ ಹಾಲಿನ ಪ್ರೋತ್ಸಾಹಧನ ಹಾಲು ಉತ್ಪಾದಕರ ಖಾತೆಗೆ ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.
ಹೈನುಗಾರರ ಹಿತ ದೃಷ್ಠಿಯಿಂದ ಹಾಲಿನ ಪ್ರೋತ್ಸಾಹಧನವನ್ನು ಹಾಲು ಉತ್ಪಾದಕರಿಗೆ ಅತ್ಯಂತ ತ್ವರಿತವಾಗಿ ಜಮಾ ಆಗುವಲ್ಲಿ ಕಾರಣೀಕರ್ತರಾದ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳು, ಪಶು ಸಂಗೋಪನಾ ಇಲಾಖೆಯ ಸಚಿವರು, ಜಿಲ್ಲೆಯ ಸಚಿವರು, ಶಾಸಕರುಗಳಿಗೆ ಮತ್ತು ಅಧಿಕಾರಿಗಳಿಗೆ ಜಿಲ್ಲೆಯ ಸಮಸ್ತ ಹಾಲು ಉತ್ಪಾದಕರ ಪರವಾಗಿ ಧನ್ಯವಾದ ತಿಳಿಸಿದರು.
ಸಮಯಕ್ಕೆ ಸರಿಯಾಗಿ ಜಮೆಯಾಗುತ್ತಿರುವ ಹಾಲಿನ ಪ್ರೋತ್ಸಾಹಧನದ ಹಣವನ್ನು ಹಾಲು ಉತ್ಪಾದಕರು ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಅವರು ಕರೆ ನೀಡಿದರು.
ಇನ್ನುಳಿದಂತೆ ಪ್ರಸ್ತುತ 2026-2027 ನೇ ಸಾಲಿನಲ್ಲಿ ಕೇವಲ ಅಗಸ್ಟ್ ಮತ್ತು ಸಪ್ಟೆಂಬರ್ ಮಾಹೆಗಳ ಹಾಲಿನ ಪ್ರೋತ್ಸಾಹಧನ ಮಾತ್ರ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗಬೇಕಾಗಿದ್ದು, ಬಾಕಿ ಇರುವ ಜುಲೈ ಮಾಹೆಯ ಹಾಲಿನ ಪ್ರೋತ್ಸಾಹಧನ ಕೂಡ ಶೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ ಎಂದರು.
ಜುಲೈ-2026 ನೇ ತಿಂಗಳ ರೂ.5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.
Kshetra Samachara
03/11/2026 07:32 pm
LOADING...