ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ:ನ.17 ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು: ಬಸವರಾಜ ಹೊರಟ್ಟಿ

ಶಿರಸಿ:ಕರ್ನಾಟಕದ ಶಿಕ್ಷಣದ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮಹತ್ವದ ಪಾತ್ರವಹಿಸುತ್ತಿದ್ದು, ಸಾವಿರಾರು ಶಿಕ್ಷಕರು ಮತ್ತು ನೌಕರರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಹಲವು ಮೂಲಭೂತ ಸೇವಾ ಮತ್ತು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಇದರ ವಿರುದ್ಧ ನವಂಬರ್ 17ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ಬಸವರಾಜ್ ಹೊರಟ್ಟಿ ಅವರು ತಿಳಿಸಿದ್ದಾರೆ.

ಅವರು ನಗರದ ಎಂಇಎಸ್ ಸಂಸ್ಥೆಯ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಮಾತನಾಡಿದರು.

ಅಲ್ಲದೆ ಈ ಅನ್ಯಾಯದ ವಿರುದ್ಧ ಪರಿಹಾರ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಸಂಘಗಳ ಹೋರಾಟ ಸಮನ್ವಯ ಸಮಿತಿ ಹುಬ್ಬಳ್ಳಿ ಒಟ್ಟಾಗಿ ಸೇರಿ ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮತ್ತು ನಂಬರ್ 18ರಂದು ಅನಿರ್ದಿಷ್ಟಾವಧಿ ಶಾಲಾ ಕಾಲೇಜು ಬಂದ್ ಮಾಡಿ ಸರ್ಕಾರದ ವಿರುದ್ಧ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಆಡಳಿತ ಮಂಡಳಿಯ ಉ.ಕ ಜಿಲ್ಲೆಯ ಒಕ್ಕೂಟದ ಅಧ್ಯಕ್ಷ ಶಶಿಭೂಷಣ್ ಹೆಗಡೆ,

ನೌಕರರ ಹೋರಾಟ ಸಮನ್ವಯ ಸಮಿತಿ ಸಂಚಾಲಕ ಜಿ.ಆರ್. ಭಟ್ , ನಾರಾಯಣ ದೈಮನೆ , ಎಲ್ ಎಂ ಹೆಗಡೆ, ಟಿ ಎಸ್ ಹಳೆಮನೆ, ಪ್ರಭಾಕರ್ ಬಂಟ್, ಎಸ್‌ ಡಿ ಮೂಡೆನ್ನನವರ್ , ಎಂ ಟಿ ಗೌಡಾ, ಪ್ರೊ. ಜಿಟಿ ಭಟ್ ಸೇರಿದಂತೆ ಅನೇಕರಿದ್ದರು.

Edited By : PublicNext Desk
Kshetra Samachara

Kshetra Samachara

04/11/2026 06:42 pm

Cinque Terre

1.28 K

Cinque Terre

0

ಸಂಬಂಧಿತ ಸುದ್ದಿ