ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರ ಆಕ್ರೋಶದ ನಡುವೆಯೂ ತಾಳ್ಮೆ ಕಳೆದುಕೊಳ್ಳದ ಜಿಲ್ಲಾಧಿಕಾರಿ – ಆನಂದ್ ಶರ್ಮಾ ನಡೆಗೆ ಮೆಚ್ಚುಗೆ!

ಬಿಹಾರ : ಅಧಿಕಾರಕ್ಕಿಂತ ಮಾನವೀಯತೆ ದೊಡ್ಡದು ಎಂಬುದನ್ನು ಜಿಲ್ಲಾಧಿಕಾರಿ ಆನಂದ್ ಶರ್ಮಾ ತಮ್ಮ ನಡೆ ಮೂಲಕ ತೋರಿಸಿದ್ದಾರೆ. ಜನರ ನೋವಿಗೆ ಸ್ಪಂದಿಸುವುದೇ ನಿಜವಾದ ಜನಸೇವೆಯ ಗುಣ.

ಬಿಹಾರದ ಮಧುಬನಿಯಲ್ಲಿ ಎಎಸ್‌ಐ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆ ಬಳಿಕ ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಜಿಲ್ಲಾಧಿಕಾರಿಯನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕುಟುಂಬದವರು, “ನಮಗೆ ಮಗಳಿದ್ದಾಳೆ, ಮುಂದೆ ಆಕೆಯ ಮದುವೆ ಹೇಗೆ ಮಾಡುವುದು?” ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಆಕ್ರೋಶಗೊಂಡ ಮಹಿಳೆಯೊಬ್ಬರು ಜಿಲ್ಲಾಧಿಕಾರಿಯ ಕಾಲರ್ ಹಿಡಿದಿದ್ದಾರೆ. ಆದರೂ ಅವರು ತಾಳ್ಮೆ ಕಳೆದುಕೊಳ್ಳದೆ ಜನರ ಅಹವಾಲು ಆಲಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಯ ಸಂಯಮದ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಧಿಕಾರಿಗಳು ಜನರ ನೋವನ್ನು ಆಲಿಸಬೇಕು, ಜನರು ಕೂಡ ತಮ್ಮ ಆಕ್ರೋಶವನ್ನು ಶಾಂತಿಯುತವಾಗಿ ವ್ಯಕ್ತಪಡಿಸಬೇಕು. ಪರಸ್ಪರ ಗೌರವ ಮತ್ತು ಮಾನವೀಯತೆಯೇ ಉತ್ತಮ ಸಮಾಜದ ಅಡಿಪಾಯ.

Edited By :
PublicNext

PublicNext

04/11/2026 08:19 am

Cinque Terre

30.04 K

Cinque Terre

2

ಸಂಬಂಧಿತ ಸುದ್ದಿ