ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್‌ನ ಬೆಲೆ ₹961 ಇದ್ದರೂ, ಡೆಲಿವರಿ ಮಾಡುವ ಸಿಬ್ಬಂದಿ ₹1,000 ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ರೇವನ್ಮರ್ ಗ್ಯಾಸ್ ಏಜೆನ್ಸಿ ವಿರುದ್ಧವೇ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸಿಲಿಂಡರ್ ಡೆಲಿವರಿ ನೀಡುವ ಸಿಬ್ಬಂದಿ ಪ್ರತಿಯೊಬ್ಬ ಗ್ರಾಹಕರಿಂದಲೂ ₹1,000 ಹಣ ವಸೂಲಿ ಮಾಡುತ್ತಿದ್ದಾರಂತೆ. ಹೆಚ್ಚುವರಿ ಹಣ ಯಾಕೆ ಎಂದು ಕೇಳಿದರೆ ವಾಹನದ ಬಾಡಿಗೆ ಎಂದು ಹೇಳುತ್ತಿದ್ದಾರಂತೆ. ಹೆಚ್ಚುವರಿ ಹಣ ವಸೂಲಿ ಬಗ್ಗೆ ಗ್ರಾಹಕರು ಪ್ರಶ್ನಿಸಲು ಹೋದರೆ, ನಮ್ಮಲ್ಲಿ ಯಾರೂ ಹೆಚ್ಚುವರಿ ಹಣ ವಸೂಲಿ ಮಾಡುವುದಿಲ್ಲ ಎಂದು ರೇವನ್ಮರ್ ಗ್ಯಾಸ್ ಏಜೆನ್ಸಿಯವರು ಹೇಳುತ್ತಿದ್ದಾರಂತೆ. ಆದರೆ, ವಿಡಿಯೋದಲ್ಲಿ ಸೆರೆಯಾದ ಅಸಲಿಯತ್ತು ಏನು?
ಸಿಲಿಂಡರ್ ಮೇಲೆ ನಮೂದಿಸಿರುವ ದರಕ್ಕಿಂತ ಹೆಚ್ಚುವರಿ ಹಣ ನೀಡಬೇಕೇ? ಡೆಲಿವರಿ ಬಾಯ್‌ಗಳಿಗೆ ಹೆಚ್ಚುವರಿ ಹಣ ನೀಡುವುದು ಕಡ್ಡಾಯವೇ? ಎಂಬ ಪ್ರಶ್ನೆಗಳು ಇದೀಗ ಗ್ರಾಹಕರನ್ನು ಕಾಡುತ್ತಿವೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/11/2026 08:47 am
LOADING...