ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಹಿಂದ ವರ್ಗಗಳ ನ್ಯಾಯಕ್ಕಾಗಿ ಬೆಂಗಳೂರು ಚಲೋ..!

ಹುಬ್ಬಳ್ಳಿ: ರಾಜ್ಯದ ಕೋಟ್ಯಂತರ ಶೋಷಿತ, ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯದ ಕುರಿತು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಶ್ರೀ ಮಧುಸೂಧನ ನಾಯ್ಕ್ ಅವರ ನೇತೃತ್ವದಲ್ಲಿ ಅತ್ಯಂತ ವೈಜ್ಞಾನಿಕವಾಗಿ ನಡೆಸಲಾದ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) - 2025’ ರ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.

ಈ ವರದಿಯು ಕೇವಲ ಅಂಕಿ - ಅಂಶಗಳ ಮಾಹಿತಿಯಲ್ಲ. ಇದು ರಾಜ್ಯದ ಪ್ರತಿಯೊಂದು ಶೋಷಿತ ಸಮುದಾಯದ ನೈಜ ಸ್ಥಿತಿಗತಿಯನ್ನು ಬಿಂಬಿಸುವ ಕನ್ನಡಿಯಾಗಿದೆ. ಆದ್ದರಿಂದ, ಸರ್ಕಾರವು ಯಾವುದೇ ಕಾಲಹರಣ ಮಾಡದೆ ಈ ವರದಿಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿ, ಅಧಿಕೃತವಾಗಿ ಜಾರಿಗೆ ತರಬೇಕು ಎಂದು ಅಹಿಂದ ಒಕ್ಕೂಟ ಕರ್ನಾಟಕ ಹಾಗೂ ಎಲ್ಲಾ ಅಹಿಂದ ಸಂಘಟನೆಗಳ ಪರವಾಗಿ ನಾವು ಬಲವಾಗಿ ಆಗ್ರಹಿಸುತ್ತಿದ್ದೇವೆ ಎಂದು ಹೋರಾಟಗಾರ ಸಿದ್ಧು ತೇಜಿ ಹೇಳಿದರು‌.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/11/2026 11:22 am

Cinque Terre

24.08 K

Cinque Terre

0

ಸಂಬಂಧಿತ ಸುದ್ದಿ