ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವೆಂಬರ್ 06 ರಂದು ಧಾರವಾಡದ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ: ಹೆಸ್ಕಾಂ ಪ್ರಕಟಣೆ

ಧಾರವಾಡ 110 ಕೆ.ವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ ನಾರಾಯಣಪುರ ಫೀಡರ್ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ನವೆಂಬರ್ 06 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಧಾರವಾಡದ ಆದರ್ಶ ನಗರ, ಸಂಪಿಗೆ ನಗರ, ವಿಕಾಸ ನಗರ, ರಕ್ಷಾ ಕಾಲೋನಿ, ಜರ್ಮನ್ ಸರ್ಕಲ್, ಜಂಬಗಿ ಹಾಸ್ಪಿಟಲ್, ಸಾಧನಕೇರಿ, ನಾರಾಯಣಪುರ, ಲಕ್ಷ್ಮೀ ಗುಡಿ, ಸನ್ಮತಿ ನಗರ, ವೈದ್ಯಮಠ ಕಾಂಪ್ಲೆಕ್ಸ್, ದಾಸನಕೊಪ್ಪ ಸರ್ಕಲ್, ಹಳಿಯಾಳ ನಾಕಾ, ಶೇಖ್ ಕಂಪೌಂಡ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Edited By : Nirmala Aralikatti
Kshetra Samachara

Kshetra Samachara

04/11/2026 07:58 pm

Cinque Terre

23.08 K

Cinque Terre

0

ಸಂಬಂಧಿತ ಸುದ್ದಿ