ಅಣ್ಣಿಗೇರಿ: ಇಡೀ ದೇಶಕ್ಕೇ ಮಾದರಿಯಾದ ಅಣ್ಣಿಗೇರಿ ನಗರದ 24×7 ಕುಡಿಯುವ ನೀರಿನ ಸರಬರಾಜು ಯೋಜನೆ ವೀಕ್ಷಿಸಲು ಹಿಮಾಚಲ ಪ್ರದೇಶದ ಸರ್ಕಾರದ 26 ಜನರ ನಿಯೋಗದ ತಂಡ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಮೊದಲಿಗೆ ಅಣ್ಣಿಗೇರಿ ಸಮೀಪ ಇರುವ ಬಸಾಪುರ ಗ್ರಾಮದ ಹತ್ತಿರ ಇರುವ 76 ಎಕರೆ ಜಾಗದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಜಲಾಶಯಕ್ಕೆ ಭೇಟಿ ನೀಡಿ, ನಂತರ ಪಟ್ಟಣದ ಶುದ್ಧ ನೀರಿನ ಸಂಗ್ರಹಾಲಯಕ್ಕೆ ಭೇಟಿ ನೀಡಿ ನೀರಿನ ಶುದ್ಧೀಕರಣ ಘಟಕ, ಪಂಪ್ ಸೆಟ್, ನೀರಿನ ಟ್ಯಾಂಕ್ ಹಾಗೂ ಜಾಕವೆಲ್ ಮಷೀನ್‌ಗಳ ಬಗ್ಗೆ ಅಧಿಕಾರಿಗಳ ಹತ್ತಿರ ಕೇಳಿ ಮಾಹಿತಿ ಪಡೆದುಕೊಂಡರು.
ತದನಂತರ ಅಲ್ಲಿಂದ ಪಟ್ಟಣದ ಕೆಲವು ವಾರ್ಡುಗಳಲ್ಲಿ ಭೇಟಿ ನೀಡಿ 24x7 ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ನಂತರ ಪುರಸಭೆ ವತಿಯಿಂದ ಹಿಮಾಚಲ ಪ್ರದೇಶದ ಅಧಿಕಾರಿಗಳಿಗೆ ಗೌರವಿಸಲಾಯಿತು. ಈ ವೇಳೆ ಹಿಮಾಚಲ ಪ್ರದೇಶದ ಕೆಲ ಅಧಿಕಾರಿಗಳು ಮಾತನಾಡಿ, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರನ್ನು ಕುಡಿಯುತ್ತಿರುವ ಅಣ್ಣಿಗೇರಿ ಜನತೆ ಬಹಳ ಪುಣ್ಯವಂತರು ಎಂದು ಹೇಳಿದರು. ನಂತರ ಪುರಸಭೆಯ ಮುಖ್ಯಾಧಿಕಾರಿ ವೈಜಿ ಗದ್ದಿಗೌಡರ ಕೆಲಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/10/2026 08:32 am
LOADING...