ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ವಿಧಾನಸೌಧಕ್ಕೆ ಹೈಟೆಕ್ ಸ್ಪರ್ಶ - ₹20 ಕೋಟಿ ವೆಚ್ಚದಲ್ಲಿ 3D ಲೇಸರ್ ಲೈಟ್ ಶೋಗೆ ಜಿಬಿಎ ಸಿದ್ಧತೆ!

ಬೆಂಗಳೂರು : ವಿಶ್ವವಿಖ್ಯಾತ ವಿಧಾನಸೌಧಕ್ಕೆ ಮತ್ತಷ್ಟು ಮೆರುಗು ನೀಡುವ ಜೊತೆಗೆ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಯೋಜನೆ ರೂಪಿಸಿದೆ. ಸುಮಾರು ₹15 ಕೋಟಿಯಿಂದ ₹20 ಕೋಟಿ ವೆಚ್ಚದಲ್ಲಿ ವಿಧಾನಸೌಧದ ಮೇಲೆ ಅತ್ಯಾಧುನಿಕ 3D ಪ್ರೊಜೆಕ್ಷನ್ ಮ್ಯಾಪಿಂಗ್ ಹಾಗೂ ಲೇಸರ್ ಲೈಟ್ ಶೋ ವ್ಯವಸ್ಥೆ ಅಳವಡಿಸಲು ಪ್ರಾಧಿಕಾರ ಮುಂದಾಗಿದೆ.

ಈ ಯೋಜನೆಗೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದು, ಅಗತ್ಯ ಅನುದಾನ ಒದಗಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಮೈಸೂರು ಅರಮನೆಯ ಮಾದರಿಯಲ್ಲಿ ವಿಧಾನಸೌಧದ ಭವ್ಯ ಕಟ್ಟಡದ ಮೇಲೆ ಧ್ವನಿ ಮತ್ತು ದೃಶ್ಯಗಳ ಸಂಯೋಜನೆಯೊಂದಿಗೆ 3D ಪ್ರೊಜೆಕ್ಷನ್ ಪ್ರದರ್ಶನ ನಡೆಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ವಾರಾಂತ್ಯಗಳಲ್ಲಿ ಲೇಸರ್ ಶೋ:

ಯೋಜನೆಯಡಿ ವಿಧಾನಸೌಧದ ಮೇಲೆ ಶಾಶ್ವತ ಲೇಸರ್ ಮ್ಯಾಪಿಂಗ್ ವ್ಯವಸ್ಥೆ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಹೈಡ್ರಾಲಿಕ್ ಉಪಕರಣಗಳು ಸೇರಿದಂತೆ ಅಗತ್ಯ ತಾಂತ್ರಿಕ ಹಾರ್ಡ್‌ವೇರ್‌ಗಳನ್ನು ಅಳವಡಿಸುವ ಪರಿಕಲ್ಪನೆ ರೂಪಿಸಲಾಗಿದೆ. ವ್ಯವಸ್ಥೆ ಕಾರ್ಯಾರಂಭಿಸಿದ ಬಳಿಕ ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳಂದು ಸಾರ್ವಜನಿಕರಿಗೆ ಧ್ವನಿ ಸಹಿತ 3D ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನ ಆಯೋಜಿಸುವ ಉದ್ದೇಶವಿದೆ.

ವಿಧಾನಸೌಧದ ವಾಸ್ತುಶಿಲ್ಪ, ಅದರ ಐತಿಹಾಸಿಕ ಮಹತ್ವ ಹಾಗೂ ಕರ್ನಾಟಕದ ವೈಶಿಷ್ಟ್ಯಗಳನ್ನು ಬೆಳಕು ಮತ್ತು ದೃಶ್ಯಗಳ ಮೂಲಕ ಜನರಿಗೆ ಪರಿಚಯಿಸಲು ಈ ವ್ಯವಸ್ಥೆ ನೆರವಾಗುವ ನಿರೀಕ್ಷೆಯಿದೆ. ಇದರಿಂದ ವಿಧಾನಸೌಧವು ಕೇವಲ ಆಡಳಿತದ ಕೇಂದ್ರವಾಗಿರದೆ, ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿಯೂ ರೂಪುಗೊಳ್ಳಲಿದೆ ಎಂಬ ಆಶಯವಿದೆ.

Edited By :
PublicNext

PublicNext

05/11/2026 08:50 am

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ