ಬೆಂಗಳೂರು: ನಟ ದರ್ಶನ್ ಮನೆಗೆ ನವೆಂಬರ್ 1 ರಂದು ಸಾಲು ಸಾಲು ಆಟೋಗಳು ಬಂದು ತಲುಪುವ ಮೂಲಕ ಸಿನಿಮೀಯ ಮಾದರಿಯ ಆತಂಕಕಾರಿ ಘಟನೆ ನಡೆದಿದೆ. ಸುಮಾರು 20ಕ್ಕೂ ಹೆಚ್ಚು ಆಟೋಗಳನ್ನು ಬುಕ್ ಮಾಡಿದ್ದ ಅನಾಮಿಕ ವ್ಯಕ್ತಿಯೊಬ್ಬ, ಸ್ಥಳಕ್ಕೆ ತಲುಪಿದ ಆಟೋ ಚಾಲಕರಿಗೆ ದರ್ಶನ್ ಮನೆಯ ಸೆಕ್ಯೂರಿಟಿಗೆ ಫೋನ್ ನೀಡುವಂತೆ ಸೂಚಿಸಿದ್ದಾನೆ.
8861859081 ಸಂಖ್ಯೆಯಿಂದ ಕರೆ ಮಾಡಿದ ಆ ವ್ಯಕ್ತಿ, ತಾನು ನಟ ಧನ್ವೀರ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದಾನೆ. ದರ್ಶನ್ ಅವರ ಮ್ಯಾನೇಜರ್ ಹಾಗೂ ಧನ್ವೀರ್ ನಡುವಿನ ಪ್ರಕರಣವನ್ನು ವಾಪಸ್ ಪಡೆಯದಿದ್ದರೆ ದರ್ಶನ್ ಅವರ ಮನೆಯನ್ನು ಹೊಡೆದು ಬೀಳಿಸುವುದಾಗಿ ಮತ್ತು ಸೆಕ್ಯೂರಿಟಿಯನ್ನು ಕೊಲೆ ಮಾಡುವುದಾಗಿ ಭೀಕರ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ವಿಜಯಲಕ್ಷ್ಮಿ ಅವರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ.
ಏಕಕಾಲಕ್ಕೆ ಹತ್ತಾರು ಆಟೋಗಳು ಮನೆ ಮುಂದೆ ಬಂದು ನಿಂತಿದ್ದನ್ನು ಕಂಡು ಮನೆ ಮಂದಿ ಮತ್ತು ಸೆಕ್ಯೂರಿಟಿ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸದ್ಯ ಈ ಹುಸಿ ಬೆದರಿಕೆ ಹಾಗೂ ಕಿಡಿಗೇಡಿತನದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
PublicNext
04/11/2026 06:04 pm
LOADING...