ಬೆಂಗಳೂರು : ಮಹಾಲಕ್ಷ್ಮೀ ಲೇಔಟ್‌ನ ಜೆ.ಸಿ. ನಗರದಲ್ಲಿ ಕಿಡಿಗೇಡಿಗಳ ಹಾವಳಿ ಮಿತಿ ಮೀರಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಅಶ್ವಥ್ ಎಂಬುವವರ ಮನೆ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮಹಿಳೆಗೆ, "ನಿನಗೆ ಹೊಗೆ ಹಾಕಿಸುತ್ತೇನೆ" ಎಂದು ಕಿಡಿಗೇಡಿಗಳು ಜೀವ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ತಡೆಯಲು ಬಂದ ಅವರ ಪತಿಯ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪುಂಡರ ಗುಂಪು, ಅಶ್ವಥ್ ಅವರ ಕಾಲಭೈರವೇಶ್ವರ ಪ್ರಾವಿಷನ್ ಸ್ಟೋರ್‌ಗೆ ನುಗ್ಗಿ ಧಮ್ಕಿ ಹಾಕಿ ಅಸಭ್ಯವಾಗಿ ವರ್ತಿಸಿದೆ. ಈ ಸಂಪೂರ್ಣ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದುಷ್ಕರ್ಮಿಗಳ ಈ ಅಟ್ಟಹಾಸದಿಂದ ಅಶ್ವಥ್ ಕುಟುಂಬ ತೀವ್ರ ಜೀವಭಯದಲ್ಲಿದೆ. ಯುವಕರ ಪುಂಡಾಟದಿಂದ ಬೇಸತ್ತ ಸಂತ್ರಸ್ತ ಕುಟುಂಬ ಈ ಕುರಿತು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ರಾಜಧಾನಿಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಇಂತಹ ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
PublicNext
05/11/2026 10:56 am
LOADING...