ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಎಂ.ಎಂ. ಸೋಮಯ್ಯ ಮನೆಯಲ್ಲಿ ಕಳ್ಳತನ: ಅಪರೂಪದ ಪದಕಗಳು ಕಳವು

ಬೆಂಗಳೂರು: 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಹಾಕಿ ಕ್ರೀಡೆಯಲ್ಲಿ ಚಿನ್ನದ ಪದಕ ತಂದುಕೊಟ್ಟ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಬೆಂಗಳೂರಿನ ಇಂದಿರಾನಗರದ ಮನೆಯಲ್ಲಿ ಕಳ್ಳತನ ನಡೆದಿದೆ. ಕಳೆದ ಭಾನುವಾರ ಕುಟುಂಬದವರು ಕೊಡಗಿಗೆ ತೆರಳಿದ್ದ ವೇಳೆ ಖದೀಮರು ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ್ದಾರೆ.

ಮನೆಯಲ್ಲಿದ್ದ 1980ರ ಒಲಿಂಪಿಕ್ಸ್ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ, 1986ರ ಸಿಯೋಲ್ ಏಷ್ಯನ್ ಗೇಮ್ಸ್ ಕಂಚಿನ ಪದಕ ಹಾಗೂ 1982ರ ಆಮ್‌ಸ್ಟರ್‌ಡ್ಯಾಮ್ ಚಾಂಪಿಯನ್ಸ್ ಟ್ರೋಫಿ ಕಂಚಿನ ಪದಕಗಳು ಕಳ್ಳರ ಪಾಲಾಗಿವೆ. ಇವುಗಳೊಂದಿಗೆ ಬೆಳ್ಳಿ ಕಪ್‌ಗಳು, ಬೆಳ್ಳಿ ಬಳೆಗಳು, ಬೆಳ್ಳಿ ಚಮಚಗಳು ಮತ್ತು ಚಿನ್ನದ ನಾಣ್ಯಗಳು ಸಹ ಕಳ್ಳತನಗೊಂಡಿವೆ.

ದೇಶದ ಹೆಮ್ಮೆಯ ಕ್ರೀಡಾ ಸಾಧನೆಯ ಅಮೂಲ್ಯ ಸ್ಮಾರಕಗಳು ಕಳ್ಳತನವಾಗಿರುವುದು ಕ್ರೀಡಾವಲಯದಲ್ಲಿ ಆಘಾತ ಮೂಡಿಸಿದೆ. ಈ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/11/2026 08:00 pm

Cinque Terre

110

Cinque Terre

0

ಸಂಬಂಧಿತ ಸುದ್ದಿ