ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಗಳ ಲವರ್ ಜೊತೆ ಏಕಾಂತದಲ್ಲಿದ್ದಾಗಲೇ ಎಂಟ್ರಿ ಕೊಟ್ಟ ಅಪ್ಪ,ಮುಂದಾಗಿದ್ದೇ ಭೀಕರ!

ಆಕೆಗಿನ್ನೂ 19 ವರ್ಷ.. ಹರೆಯದ ವಯಸ್ಸು ಹುಚ್ಚುಕೋಡಿ ಮನಸ್ಸು ಎನ್ನುವ ಹಾಗೆ ತಂದೆ ಜೊತೆಯೇ ಕೆಲಸ ಮಾಡಿಕೊಂಡಿದ್ದ 24 ವರ್ಷದ ಯುವಕನ ಜೊತೆ ಆಕೆಗೆ ಪ್ರೇಮಾಂಕುರವಾಗಿತ್ತು. ಆರಂಭದಲ್ಲಿ ಚೆನ್ನಾಗಿದ್ದ ಪ್ರೀತಿಗೆ ತಂದೆಯೇ ವಿಲನ್‌ ಆಗಿಬಿಟ್ಟಿದ್ದರು.

ಹೌದು ತಮಿಳುನಾಡು ಮೂಲಕ ಆನಂದ್ ಬೆಂಗಳೂರಿನಲ್ಲಿ ಸ್ವೀಟ್‌ ಕಾರ್ನ್‌ ತಯಾರಿಸುವ ಯಂತ್ರಗಳ ತಯಾರಿ ಮಾಡುವ ಫ್ಯಾಕ್ಟರಿಯನ್ನು ನಡೆಸುತ್ತಿದ್ದರು. ಕೇರಳ ಮೂಲದ ಕಿರಣ್ ಎಂಬ ಯುವಕನಿಗೆ ತಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಕೂಡ ಕೊಟ್ಟಿದ್ದರು. ಆನಂದ್‌ ಗೆ ಮೂವರು ಮಕ್ಕಳು ಎಲ್ಲರನ್ನೂ ಚೆನ್ನಾಗಿ ಓದಿಸಿ ದಡ ಸೇರಿಸಬೇಕು ಎನ್ನುವ ಉದ್ದೇಶದಿಂದ ತಾವಿಲ್ಲಿ ದುಡಿದ್ರೂ ಮಕ್ಕಳನ್ನ ಒಳ್ಳೆ ಹಾಸ್ಟೆಲ್‌ನಲ್ಲಿ ಸೇರಿಸಿ ಓದಿಸುತ್ತಿದ್ದರು. ಅದಾಗಲೇ ಆನಂದ್‌ ಹಿರಿ ಮಗಳು ಮತ್ತು ಕಿರಣ್‌ ನಡುವೆ ಪ್ರೇಮಾಂಕುರವಾಗಿತ್ತು.ಆದ್ರೆ, ಇದು ತನ್ನ ತಂದೆಗೆ ತಿಳಿದಿಲ್ಲ ಎನ್ನುವ ಭ್ರಮೆಯಲ್ಲಿದ್ದ ಅವಳಿಗೆ ತಂದೆ ಶಾಕ್‌ ನೀಡಿದ್ದರು,

ಇಬ್ಬರನ್ನೂ ಹೇಗಾದ್ರು ಮಾಡಿ ರೆಡ್‌ ಹ್ಯಾಂಡ್‌ ಆಗಿ ಹಿಡಿಯಬೇಕು ಎಂದು ಆನಂದ್‌ ಪ್ಲ್ಯಾನ್‌ ಮಾಡಿದ್ರು ಅದರಂತೆ ರಜೆ ಎಂದು ಮಗಳು ಮನೆಗೆ ಬಂದಿದ್ದಳು. ಇದೇ ಸರಿಯಾದ ಸಮಯ ಎಂದು ಅರಿತ ಆನಂದ್‌ ನಿನ್ನೆ ಪತ್ನಿಯನ್ನು ಕರೆದುಕೊಂಡು ತಮಿಳುನಾಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಅಪ್ಪ ಅಮ್ಮ ಮನೆಯಲ್ಲಿ ಇಲ್ಲ ಅಂತ ಪ್ರಿಯಕರನ ಜೊತೆ ಏಕಾಂತದಲ್ಲಿ ಇರಲು ಯುವತಿ ಕಿರಣ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ತಮಿಳುನಾಡಿಗೆ ಹೋಗ್ತೀವಿ ಎಂದಿದ್ದ ಆನಂದ್‌ ಕೆಲವೇ ಗಂಟೆಗಳಲ್ಲಿ ವಾಪಸ್‌ ಆಗಿದ್ದಾರೆ. ಈ ವೇಳೆ ಮನೆಯಲ್ಲಿ ಮಗಳು ಮತ್ತು ಕಿರಣ್‌ ಒಂದೇ ಕೊಠಡಿಯಲ್ಲಿ ಇದ್ದದ್ದನ್ನ ಕಂಡು ಆಕ್ರೋಶಭರಿತರಾಗಿದ್ದಾರೆ. ತಕ್ಷಣ ಮಗಳಿಗೆ ಬೈದು ಚಿಕ್ಕಬಳ್ಳಾಪುರದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಬಳಿಕ, ನನ್ನ ಮಗಳೆ ನಿನಗೆ ಬೇಕಾ ಎಂದು ಕಿರಣ್‌ ಮೇಲೆ ಬ್ಯಾಟ್‌ ಹಾಗೂ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ, ಹೊಟ್ಟೆ, ಎದೆ ಭಾಗ ಸೇರಿದಂತೆ ದೇಹದ ಹಲವು ಭಾಗಗಳಿಗೆ ಹಲ್ಲೆ ನಡೆಸಿದ ಪರಿಣಾಮ ಕಿರಣ್‌ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ. ತಕ್ಷಣ ಅವನನ್ನು ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಆಂತರಿಕ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಕಿರಣ್‌ ಮೃತಪಟ್ಟಿದ್ದಾರೆ.

ಇನ್ನೂ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಯಲಹಂಕ ಪೊಲೀಸರು ಆರೋಪಿ ಆನಂದ್‌ನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಂದು ಕ್ಷಣದ ಆಕ್ರೋಶದಿಂದ ಯುವಕನ ಜೀವ ಹೋಗಿದ್ದು ಕುಟುಂಬದ ಬದುಕಿನಲ್ಲಿ ದುರಂತ ಸಂಭವಿಸಿದೆ.

Edited By :
PublicNext

PublicNext

04/11/2026 08:26 pm

Cinque Terre

6.71 K

Cinque Terre

0

ಸಂಬಂಧಿತ ಸುದ್ದಿ