ಬೆಂಗಳೂರು: ಜಾರಿ ನಿರ್ದೇಶನಾಲಯದ ತನಿಖೆಯ ವೇಳೆ ನಕಲಿ ಔಷಧಿ ತಯಾರಿಕೆ ಹಾಗೂ ಮಾರಾಟದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ. ಯಾವುದೇ ಪರವಾನಗಿಯಿಲ್ಲದೆ ಔಷಧಿಗಳನ್ನು ತಯಾರಿಸಿ, ಮರುಪ್ಯಾಕಿಂಗ್ ಹಾಗೂ ಮರು-ಲೇಬಲಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ.
ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಈ ಅಕ್ರಮ ದಂಧೆ ನಡೆಸುತ್ತಿದ್ದ. ಬೇರೆ ರಾಜ್ಯಗಳಿಂದ ಅಗ್ಗದ ಬಲ್ಕ್ ಫಾರ್ಮುಲೇಶನ್‌ಗಳನ್ನು ತರಿಸಿ, ಹೊಸ ವಾಯಲ್‌ಗಳಲ್ಲಿ ಮರುಪ್ಯಾಕ್ ಮಾಡಲಾಗುತ್ತಿತ್ತು. ಝಾವಿಸೆಫ್ಟಾ ಹಾಗೂ ಎಮ್‌ಬ್ಲಾವಿಯೊ ಔಷಧಿಗಳನ್ನು ದುಬಾರಿ ಫೈಜರ್ ಎಂದು ಮರು-ಲೇಬಲ್ ಮಾಡಿ ವಂಚಿಸಲಾಗುತ್ತಿತ್ತು.
ಡಿಎಂ ಫಾರ್ಮಸ್ಯುಟಿಕಲ್ಸ್ ಮೂಲಕ ಕೃಪಾ ಹೆಲ್ತ್‌ಕೇರ್‌ಗೆ ಈ ಔಷಧಿಗಳನ್ನು ಪೂರೈಸಲಾಗುತ್ತಿತ್ತು. ಅಸಲಿ ಔಷಧಿಗಳ ಜೊತೆಗೆ ಈ ನಕಲಿ ಔಷಧಿಗಳನ್ನು ವೈದ್ಯಕೀಯ ಮಳಿಗೆಗಳು ಹಾಗೂ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಜಾಲದ ಕುರಿತು ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Kshetra Samachara
04/11/2026 08:03 pm
LOADING...