ಬೆಂಗಳೂರು: ಕೆಲವು ಕಡೆ ಹಾಲಿನ ದರ ಲೀಟರ್‌ಗೆ 8 ರೂ. ಬದಲಿಗೆ 12 ರೂ. ಹೆಚ್ಚಳವಾಗಿದೆ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, "ಹಾಲಿನ ದರದಲ್ಲಿ ವ್ಯತ್ಯಾಸವಾಗಲು ಅದರ ಗುಣಮಟ್ಟ ಹಾಗೂ ಕೊಬ್ಬಿನ ಅಂಶ ಕಾರಣ" ಎಂದು ಸಿಎಂ ಡಿಕೆಶಿ ಇಂದು ತಿಳಿಸಿದರು.
"ಎಲ್ಲ ಹಾಲೂ ಒಂದೇ ರೀತಿಯಲ್ಲಿರುವುದಿಲ್ಲ. ಸಾಮಾನ್ಯ ಹಾಲು, ನಾಟಿ ಹಸುವಿನ ಹಾಲು ಹಾಗೂ ಎಮ್ಮೆ ಹಾಲು ಬೇರೆ ಬೇರೆಯಾಗಿರುತ್ತವೆ. ಅವುಗಳ ಕೊಬ್ಬಿನ ಅಂಶವೂ (ಫ್ಯಾಟ್) ವಿಭಿನ್ನವಾಗಿರುತ್ತದೆ. ಈ ವ್ಯತ್ಯಾಸಗಳನ್ನು ಜನರು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.
PublicNext
05/11/2026 09:06 am
LOADING...