ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರ ಬಂಧನ ಭೀತಿಯಿಂದ ರೌಡಿಶೀಟರ್ ಅಕೀಫ್ ಹೈಡ್ರಾಮಾ; ಕಲ್ಲಿನಿಂದ ತಾನೇ ಹೊಡೆದುಕೊಂಡು ಗಾಯ!

ಶಿವಮೊಗ್ಗ : ಶಿವಮೊಗ್ಗದಲ್ಲಿ ರೌಡಿಶೀಟರ್ ಅಕೀಫ್ ಯಾನೆ ಪುಕ್ಕಿ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಕಲ್ಲಿನಿಂದ ತಾನೇ ಹೊಡೆದುಕೊಂಡು ಗಾಯ ಮಾಡಿಕೊಂಡು ಹೈಡ್ರಾಮಾ ಸೃಷ್ಟಿಸಿರುವ ಘಟನೆ ನಡೆದಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮುರಾದ್ ನಗರದ 4ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ಅಕೀಫ್ 2027ರ ಮಾರ್ಚ್‌ವರೆಗೆ ಶಿವಮೊಗ್ಗದಿಂದ ಗಡಿಪಾರಾಗಿದ್ದರೂ, ಆದೇಶ ಉಲ್ಲಂಘಿಸಿ ನಗರದಲ್ಲೇ ತಲೆಮರೆಸಿಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸರು ಮುರಾದ್ ನಗರದಲ್ಲಿ ದಾಳಿ ನಡೆಸಿದಾಗ, ಆತನ ಸಹಚರರು ಪರಾರಿಯಾಗಿದ್ದಾರೆ. ಆದರೆ, ಗಡಿಪಾರು ಆದೇಶ ಉಲ್ಲಂಘಿಸಿದ್ದ ಆರೋಪಿ ಅಕೀಫ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪೊಲೀಸರ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ಕಲ್ಲಿನಿಂದ ತಾನೇ ಎರಡು ಬಾರಿ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದಾನೆ. ಬಂಧನದ ವೇಳೆ ಆತನ ಬಳಿ ಗಾಂಜಾ ಅಥವಾ MDMA ಮಾದಕ ವಸ್ತು ಇತ್ತೇ ಎಂಬ ಶಂಕೆ ವ್ಯಕ್ತವಾಗಿದ್ದು, ಡ್ರಗ್ಸ್ ಸಿಗದಂತೆ ಮುಚ್ಚಿಹಾಕಲು ಪೊಲೀಸರ ವಿರುದ್ಧ ಹಲ್ಲೆಯ ನಾಟಕವಾಡಿದ್ದಾನೆಯೇ ಎಂಬ ಅನುಮಾನ ಮೂಡಿದೆ.

ಆರೋಪಿ ಅಕೀಫ್ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, "ಪೊಲೀಸರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ" ಎಂದು ಆರೋಪಿಸಿದ್ದಾನೆ. ಆತನ ಕುಟುಂಬಸ್ಥರೂ ಇದೇ ಆರೋಪ ಮಾಡಿದ್ದಾರೆ. ಕೊಲೆಯತ್ನ ಸೇರಿದಂತೆ ಒಟ್ಟು 9 ಪ್ರಮುಖ ಪ್ರಕರಣಗಳನ್ನು ಎದುರಿಸುತ್ತಿರುವ ಈತನ ಬಂಧನ ಹಾಗೂ ಡ್ರಗ್ಸ್ ಪತ್ತೆ ಕುರಿತು ಪೊಲೀಸರಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Edited By : Vinayak Patil
PublicNext

PublicNext

05/11/2026 12:03 pm

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ