ಶಿವಮೊಗ್ಗ : ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬೇಕು ಎಂದು ಡಿಮ್ಯಾಂಡ್ ಮಾಡುವುದು ತಪ್ಪು ಹಾಗೂ ಕಾಂಗ್ರೆಸ್ ಯಾವುದೇ ರೀತಿಯ ಅರಾಜಕತೆ ಸೃಷ್ಟಿಸಿದರೂ ಜನರು ಅವರಿಗೆ ವೋಟ್ ಕೊಡುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 2028ರ ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.
ಇತ್ತೀಚೆಗೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕೂ ಸೀಟುಗಳಲ್ಲಿ ಮುಖಭಂಗವಾಗಿದೆ. ಮುಂಬರುವ ಹಿರಿಯೂರು ಕ್ಷೇತ್ರದಲ್ಲೂ ಜನರು ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ. ಇವಿಎಂ ವಿರೋಧಿಸಿ ಹೋರಾಟ ಮಾಡಿದರೆ ಗೆಲುವು ಸಾಧಿಸಲು ಸಾಧ್ಯವಿಲ್ಲ, ಕಾಂಗ್ರೆಸ್ ನಾಯಕರು ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಜನರಿಂದ ಸೂಕ್ತ ತಿರುಗೇಟು ಸಿಗುವುದು ಖಚಿತ ಎಂದರು.
ಇದೇ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಜನರ ಬದುಕಿನ ಜೊತೆ ಆಟವಾಡುವ ರಾಜಕಾರಣವಾಗಿದೆ. ಸರ್ಕಾರ ಘೋಷಿಸಿದ ಯಾವುದೇ ಪ್ರಾಜೆಕ್ಟ್‌ಗಳ ಹಣ ಬಡವರಿಗೆ ತಲುಪುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಹಾಗೂ ನಾಯಕರ ಕೈಯಲ್ಲಿ ಅಧಿಕಾರವಿರುವಾಗ ಜನಪರ ಕೆಲಸಗಳನ್ನು ಮಾಡಲು ಮುಂದಾಗಲಿ ಎಂದರು.
ಬೈಟ್ : ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
PublicNext
04/11/2026 02:15 pm
LOADING...