ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಶಿವಮೊಗ್ಗ : ಜೈಲಿನಲ್ಲಿ ವಿಚಾರಣಾಧೀನ ಕೈದಿ ದರ್ಶನ್ ಮೇಲೆ ಮೂವರಿಂದ ಭೀಕರ ಹಲ್ಲೆ

ಶಿವಮೊಗ್ಗ : ನಗರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬರ ಮೇಲೆ ಸಹ ಕೈದಿಗಳು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಕುಮುದ್ವತಿ ವಿಭಾಗದ ಕೊಠಡಿ ಸಂಖ್ಯೆ 10ರಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಕೈದಿ ದರ್ಶನ್ ಎಂಬುವವರ ಮೇಲೆ ಮಧು, ಜೋಶ್ವಾ ಹಾಗೂ ರೋಷನ್ ಎಂಬ ಮೂವರು ಸಹ ಕೈದಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಸಹ ಕೈದಿಗಳ ದಿಢೀರ್ ಹಲ್ಲೆಯಿಂದ ದರ್ಶನ್ ಅವರ ಕಿವಿ ಹಾಗೂ ಎದೆಯ ಎಡಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಲ್ಲದೆ, ಈ ಘಟನೆಯ ಬಗ್ಗೆ ಜೈಲಿನ ಅಧಿಕಾರಿಗಳಿಗಾಗಲಿ ಅಥವಾ ಹೊರಗಡೆಯಾಗಲಿ ಮಾಹಿತಿ ನೀಡಿದರೆ ಪ್ರಾಣ ತೆಗೆಯುವುದಾಗಿ ಆರೋಪಿಗಳು ದರ್ಶನ್ ಅವರಿಗೆ ಜೀವ ಬೆದರಿಕೆ ಹಾಕಿದ್ದರು.

ಘಟನೆ ನಡೆದ ಬಳಿಕ ಪರಿಶೀಲನೆಗೆ ಆಗಮಿಸಿದ ಜೈಲು ಅಧೀಕ್ಷಕ ಪಿ. ಮಹದೇವ ನಾಯ್ಕ್ ಅವರಿಗೆ ಗಾಯಗೊಂಡ ಕೈದಿ ದರ್ಶನ್ ಘಟನೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಜೈಲು ಅಧೀಕ್ಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇದೀಗ ವಿಚಾರಣಾಧೀನ ಕೈದಿಗಳ ಸುರಕ್ಷತೆ ಹಾಗೂ ಜೈಲಿನ ಆಡಳಿತದ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಪ್ರಶ್ನೆಗಳು ಮೂಡಿವೆ.

Edited By : PublicNext Desk
PublicNext

PublicNext

05/11/2026 10:59 am

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ