ಬೆಂಗಳೂರು : ಬಿಸಿಲಿರಲಿ, ಮಳೆಯಿರಲಿ, ಕೊಡೆ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದರೂ ನಮ್ಮ ಮದ್ಯಪ್ರಿಯರಿಗೆ ಮಾತ್ರ ಯಾವುದೇ ಟೆನ್ಷನ್ ಇರುವುದಿಲ್ಲ. ನಿನ್ನೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸರ್ಜಾಪುರ ರಸ್ತೆಯಲ್ಲಿ ಮಳೆ ನೀರು ಮಂಡಿಯುದ್ದ ನಿಂತು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲೆಲ್ಲ ನೀರು ತುಂಬಿಕೊಂಡಿದ್ದರೂ ಮದ್ಯಪ್ರಿಯರ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ.
ವಿಶೇಷವಾಗಿ ಕೊಡತಿ ಗೇಟ್ ಬಳಿಯ ಬಾರ್ ಒಂದರ ಒಳಗೆ ಮಳೆ ನೀರು ನುಗ್ಗಿದರೂ, ಮದ್ಯಪ್ರಿಯರಿಗೆ ಮಾತ್ರ ಯಾವುದೇ ಟೆನ್ಷನ್ ಇರಲಿಲ್ಲ. ಬಿಸಿಲಿರಲಿ, ಮಳೆಯೇ ಬರಲಿ, ಎಣ್ಣೆ ಬೇಕೇ ಬೇಕು ಎನ್ನುವಂತೆ ಮಂಡಿಯುದ್ದ ನಿಂತ ನೀರನ್ನೂ ಲೆಕ್ಕಿಸದೆ ಬಂದ ಡ್ರಿಂಕ್ ಬಾಯ್ಸ್, ಹೇಗಾದರೂ ಮಾಡಿ ಮದ್ಯ ಖರೀದಿಸಿ ತಮ್ಮ ದಾರಿ ಹಿಡಿದರು.
ಮಳೆಯ ಅಬ್ಬರ ಎಷ್ಟೇ ಇದ್ದರೂ ಮದ್ಯಪ್ರಿಯರ ಈ ಹಠಮಾರಿತನದ ವಿಡಿಯೋ ಹಾಗೂ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತಮಾಷೆಯ ಚರ್ಚೆಗೆ ಗ್ರಾಸವಾಗಿವೆ. ಮಳೆ ನೀರು ನುಗ್ಗಿದರೂ ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ ಎಂಬುದು ಬಾರ್ ಮಾಲೀಕರಿಗೂ ಸಮಾಧಾನ ತಂದಿದೆ.
PublicNext
05/11/2026 02:25 pm
LOADING...