ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಶೇಷ ಸಂಪುಟ ಸಭೆ ಅಪೂರ್ಣವಾಗಿದ್ದು ಯಾಕೆ?

ಬೆಂಗಳೂರು: ಬಹುಚರ್ಚಿತ ಜಾತಿಜನಗಣತಿ ವರದಿ ಬಗ್ಗೆ ಚರ್ಚಿಸಲು ವಿಶೇಷ ಸಂಪುಟ ಸಭೆ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೀತು. ವಿಶೇಷ ಸಂಪುಟ ಸಭೆಗೂ ಮುನ್ನ ಲಿಂಗಾಯತ ಸಚಿವರು ಮತ್ತು ಒಕ್ಕಲಿಗ ಸಚಿವರು ಪ್ರತ್ಯೇಕ ಸಭೆಗಳನ್ನ ಮಾಡಿದ್ದರು ಕಾರಣ ಈ ಜಾತಿಜನಗಣತಿ ವರದಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಪ್ರಬಲವಾಗಿ ವಿರೋಧಿಸಿವೆ. ಹೀಗಾಗಿ ನಿನ್ನೆ ಸಂಪುಟ ಸಭೆಗೂ ಮುನ್ನ ಪ್ರತ್ಯೇಕ ಸಭೆಗಳನ್ನ ಎರಡು ಸಮುದಾಯಗಳು ಚರ್ಚೆ ನಡೆಸಿದ್ದವು. ಇನ್ನೂ ನಿನ್ನೆ ನಡೆದ ವಿಶೇಷ ಸಂಪುಟ ಸಭೆ ಒಂದು ತೀರ್ಮಾನಕ್ಕೆ ಬರಲು ವಿಫಲವಾಗಿದೆ. ಈ ವರದಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಚಿವರು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ ತರಾತುರಿಯಲ್ಲಿ ನಿರ್ಧಾರ ಬೇಡ ಕೆಲವು ಗೊಂದಲಗಳಿವೆ ಎಂದು ಸಂಪುಟ ಸಭೆಯಲ್ಲಿ ಮನವಿ ಮಾಡಿದ್ದಾರೆ. ಅಲ್ದೇ ಕೇವಲ ಮುಸ್ಲಿಂ ಉಪಪಂಗಡವನ್ನ ಪರಿಗಣಿಸದೆ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳನ್ನ ಪ್ರತ್ಯೇಕಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಕೆಲವು ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯಗಳನ್ನ ಲಿಖಿತ ಉತ್ತರದಲ್ಲಿ ನೀಡಿ ಎಂದು ಸಂಪುಟದಲ್ಲಿ ಸಿಎಂ ಸೂಚಿಸಿದ್ದಾರೆ. ಹೀಗಾಗಿ ನಿನ್ನೆಯ ಸಂಪುಟ ಸಭೆ ಅಪೂರ್ಣವಾಗಿದ್ದು ಮತ್ತೆ ಮೇ 2 ರಂದು ವಿಶೇಷ ಸಂಪುಟ ಸಭೆ ಕರೆದು ಚರ್ಚಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ.

ಜಾತಿಜನಗಣತಿ ವರದಿ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುವಾಗ ಪ್ರತ್ಯೇಕ‌ ಲಿಂಗಾಯತ ಧರ್ಮದ ವಿಚಾರಕ್ಕೆ ಲಿಂಗಾಯತ ಸಚಿವರೇ ಜಟಾಪಟಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಚಿವರಾದ ಶಿವಾನಂದ ಪಾಟೀಲ್, ಎಸ್ ಎಸ್ ಮಲ್ಲಿಕಾರ್ಜುನ ಮತ್ತು ಎಂಬಿ ಪಾಟೀಲ್ ನಡುವೆ ಜಟಾಪಟಿ ಮಾಡಿಕೊಂಡಿದ್ದಾರೆ, ಕಳೆದ ಬಾರಿ ಹೀಗೆ ಪ್ರತ್ಯೇಕ ಧರ್ಮದ ವಿಚಾರ ತಂದು ಸಿಎಂ ಅವರನ್ನ ದಾರಿ ತಪ್ಪಿಸಿದ್ರಿ ಎಂದು ಎಂಬಿ ಪಾಟೀಲ್ ಗೆ ಶಿವಾನಂದ ಪಾಟೀಲ್ ತಿವಿದಿದ್ದಾರೆ. ಆಗ ಒಳ್ಳೆಯ ಕೆಲಸ ಮಾಡಿಯೂ ನಾವು ಸೋಲಬೇಕಾಯಿತು, ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಅವಕಾಶವಿತ್ತು ಆದರೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ತಂದು ಹಾಳು ಮಾಡಲಾಯ್ತು ಯಾವುದೇ ಇಂತಹ ಸೂಕ್ಷ್ಮ ವಿಚಾರ ತರುವಾಗ ನೂರು ಬಾರಿ ಯೋಚಿಸಿ,ಇದರ ಪರಿಣಾ‌ಮಗಳನ್ನ ತಿಳಿದುಕೊಳ್ಳದೇ ಮುಂದುವರಿಯುತ್ತಿದ್ದೀರಾ ಜನ ಏನು ದಡ್ಡರಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸ್ತಾರೆ, ಕಾಂಗ್ರೆಸ್ ಪಕ್ಷ ಉಳಿಯಬೇಕಾ ಬೇಡ್ವಾ ಎಂದು ಪ್ರಶ್ನಿಸಿದ ತುಸು ಖಾರವಾಗಿ ಸಂಪುಟ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಎಂಬಿ ಪಾಟೀಲ್ ,ನಾನು ನಾನು ಗೆದ್ದಿಲ್ಲವೇ ಎಂದ ತಿರುಗೇಟು ನೀಡಿದರು ಈ ವೇಳೆ ಏರು ಧ್ವನಿಯಲ್ಲಿ ಜಟಾಪಟಿ ನಡೆದಿದೆ ಎನ್ನಲಾಗಿದೆ.

ಇನ್ನೂ ಈ ವಿಶೇಷ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನ ಹೇಳುವ ಸಮಯದಲ್ಲಿ ಜಾತಿಗಳ ಪ್ರವರ್ಗವಾರು ವರ್ಗೀಕರಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಮೊದಲಿದ್ದ ಪ್ರವರ್ಗ-1 ತೆಗೆದು ಹಾಕಿ ಪ್ರಗರ್ವ 1A ಹಾಗೂ 1B ಎಂದು ವರ್ಗೀಕರಣ ಮಾಡಿರೋದಕ್ಕೆ ಆಕ್ಷೇಪಿಸಿದ್ದಾರೆ, ಕೆಲವು ನಿಗದಿತ ಜಾತಿಗಳನ್ನು ಮಾತ್ರ ಪ್ರವರ್ಗ1A ಹಾಗೂ 1B ಗೆ ಸೇರ್ಪಡೆ ಮಾಡಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಒಕ್ಕಲಿಗ, ಲಿಂಗಾಯತರಲ್ಲಿ ಬಡವರಿಲ್ವಾ ಎಂದು ಏರು ಧ್ವನಿ ಯಲ್ಲಿ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ, ಡಿಕೆ ಶಿವಕುಮಾರ್ ಮಾತಿಗೆ ದನಿಗೂಡಿಸಿದ ಲಿಂಗಾಯತ ಸಚಿವರು ಧ್ವನಿಗೊಡಿಸಿ ನಮ್ಮವರೂ ಕೇವಲ ಒಂದೇ ದನ ಕಟ್ಟಿಕೊಂಡು ಜೀವನ ನಡೆಸುವವರಿದ್ದಾರೆ ಅವರು ಶ್ರೀಮಂತರಲ್ಲ ಎಂದು ಡಿಕೆಶಿ ಮಾತಿಗೆ ಬೆಂಬಲಿಸಿದ ಲಿಂಗಾಯತ ಸಚಿವರು.

ಇನ್ನೂ ಈ ಜಾತಿಗಣತಿಯಲ್ಲಿ ಜಾತಿಗಳ ಸಂಖ್ಯೆ ಕಡಿಮೆ ತೋರಿಸಿರುವ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ರಿಂದ ಸಲಹೆ ನೀಡಿದ್ದಾರೆ, ಎಲ್ಲರಿಗೂ ಜಾತಿ ಗಣತಿಯ ವಿವರ ಲಭ್ಯವಾಗುವಂತೆ ಮಾಡೋಣ, ಕ್ಷೇತ್ರವಾರು, ತಾಲೂಕುವಾರು ಅಂಕಿ ಅಂಶವನ್ನ ದತ್ತಾಂಶ ಬಿಡುಗಡೆ ಮಾಡೋಣ, ಪಂಚಾಯತ್ ಹಂತದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿಸೋಣ,ವ್ಯತ್ಯಯವಾಗಿದ್ದರೆ ಆಯಾಯ ತಾಲೂಕು ಮಟ್ಟದಲ್ಲೇ ಸಮಾಜದ ಹಾಗೂ ಕಾರ್ಯಾಂಗದಿಂದ ಮಾಹಿತಿ ಒದಗಿಸುವ ಕೆಲಸ ಆಗಲಿ, ಈಗ ವ್ಯತ್ಯಾಸ ಆಗಿದೆ ಎನ್ನುತ್ತಿದ್ದಾರೆ ಅಲ್ವಾ ಅವರು ದಾಖಲೆ ಸಮೇತ ಅಲ್ಲೇ ಮಂಡಿಸಲಿ ಆಗ ಬೇಕಾದಲ್ಲಿ ಸರಿಪಡಿಸುವ ಕೆಲಸ ಮಾಡೋಣ ಸಂಪುಟಕ್ಕೆ ಸಚಿವ ಸಂತೋಷ್ ಲಾಡ್ ಸಲಹೆ ನೀಡಿದರು.

ನಾವು ಪ್ರಣಾಳಿಕೆ ಮತ್ತು ಕಾಂಗ್ರೆಸ್ ಪಕ್ಷದ ಪಾಲಿಸಿಯಂತೆ ಜಾತಿಜನಗಣತಿ ವರದಿ ಜಾರಿಯಾಗಬೇಕು ಎಂದು ಸಂಪುಟ ಸಭೆಯಲ್ಲಿ ಒಬಿಸಿ ಸಚಿವರು ಆಗ್ರಹಿಸಿದ್ದಾರೆ. ಒಟ್ಟಾರೆ ಸಚಿವರುಗಳು ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನೇನೋ ಹೇಳಿದ್ದಾರೆ ಆದ್ರೆ ಲಿಂಗಾಯತ ಮತ್ತು ಒಕ್ಕಲಿಗ ಸಚಿವರು ಇದಕ್ಕೆ‌ ಆಕ್ಷೇಪ ವ್ಯಕ್ತಪಡಿಸಿದ್ದು ಸಿಎಂಗೆ ಜಾತಿ ಜನಗಣತಿ ವರದಿ ಸ್ವೀಕರದ ಬಗ್ಗೆ ದೊಡ್ಡ ತಲೆನೋವಾಗಿದೆ. ಅಂಕಿ ಅಂಶಗಳ ಬಗ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತವಾಗುತ್ತಿದ್ದಾರೆ ಇದನ್ನ ಮುಂದಿನ ಕ್ಯಾಬಿನೆಟ್ ನಲ್ಲಿ ಯಾವ ರೀತಿ ಸಂಬಾಳಿಸಲಿದ್ದಾರೆ ಸಿಎಂ ಅನ್ನೋದನ್ನ ಕಾದುನೋಡಬೇಕಿದೆ.

ಶರತ್ ಕಪ್ಪನಹಳ್ಳಿ, ಪೊಲಿಟಿಕಲ್ ಬ್ಯೂರೋ,

ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Manjunath H D
PublicNext

PublicNext

18/04/2025 04:09 pm

Cinque Terre

42.71 K

Cinque Terre

1

ಸಂಬಂಧಿತ ಸುದ್ದಿ