", "articleSection": "Business,Education", "image": { "@type": "ImageObject", "url": "https://prod.cdn.publicnext.com/s3fs-public/405356-1750322473-skill.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಷೇಶ ಸುದ್ದಿ ಬೆಳಗಾವಿ: ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಂದೆ ಒಂದು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾ...Read more" } ", "keywords": "Belagavi, VTU, Industry Inside Campus, innovation, education-industry collaboration, Karnataka news, VTU initiative.", "url": "https://dashboard.publicnext.com/node" }
ವಿಷೇಶ ಸುದ್ದಿ
ಬೆಳಗಾವಿ: ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಂದೆ ಒಂದು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾಸ ಸೃಷ್ಟಿಸಿದೆ. ಇದರ ಜೋತೆಗೆ "ಇಂಡಸ್ಟ್ರಿ ಇನ್ಸೈಡ್ ದಿ ಕ್ಯಾಂಪಸ್" ಎನ್ನುವ ಕಲ್ಪನೆಯನ್ನು ವಿವಿ ಪರಿಚಯಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಪರ ಯೋಜನೆಗಳಿಂದ ಇತ್ತೀಚೆಗೆ ಹೆಸರುವಾಸಿಯಾಗುತ್ತಿದೆ. ವಿವಿಯ ಆವರಣದಲ್ಲಿ ಇಂಡಸ್ಟ್ರಿ ಇನ್ಸೈಡ್ ದಿ ಕ್ಯಾಂಪಸ್ ಎನ್ನುವ ಪರಿಕಲ್ಪನೆ ಜಾರಿಗೆ ಮಾಡಲು "ವಿಶ್ವೇಶ್ವರಯ್ಯ ರಿಸರ್ಚ್ ಆಂಡ್ ಇನೋವೇಶನ್ ಫೌಂಡೇಶನ್" ಸ್ಥಾಪಿಸಲಾಗಿದೆ. ಇದರಲ್ಲಿ ಅನೇಕ ಕಂಪನಿಗಳಿಗೆ ತಮ್ಮ ಕೆಲಸ ಆರಂಭಿಸಲು ಸ್ಥಳ ನೀಡಲಾಗಿದೆ. ವಿಶ್ವೇಶ್ವರಯ್ಯ ರಿಸರ್ಚ್ ಆಂಡ್ ಇನೋವೇಶನ್ ಫೌಂಡೇಶನ್ ನಲ್ಲಿ ಬರುವ ಕಂಪನಿಗಳು ವಿವಿಗೆ ಇಂತಿಷ್ಟು ಬಾಡಿಗೆ ಕೂಡಾ ನೀಡಿಬೇಕು. ಇದರಿಂದ ವಿವಿಗೆ ಆದಯ ಕೂಡ ಬರುತ್ತಿದೆ. ಜೊತೆಗೆ ಅಂತಿವ ವರ್ಷದ ವಿದ್ಯಾರ್ಥಿಗಳಿಗೆ 6 ತಿಂಗಳ ಕಾಲ "ಆಲ್ ರೌಂಡ್ ಸ್ಕೀಲ್ ಟ್ರೈನಿಂಗ್" ನೀಡಲಾಗುತ್ತಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಕೆಲ ಕಂಪನಿಗಳು "ಸ್ಟೇ ಫಂಡ್" ಕೂಡಾ ನೀಡುತ್ತಿದೆ. ಇಲ್ಲಿ ಟ್ರೈನಿಂಗ್ ಪಡೆಯುವ ವಿದ್ಯಾರ್ಥಿಗಳಿಗೆ ಮುಂದೆ ಉದ್ಯೋಗ ದೊರೆಯಲು ಹೆಚ್ಚು ಸ್ಕಿಲ್ ಕಲಿಸಲಾಗುತ್ತದೆ. ಪ್ರತಿ ವರ್ಷ 3 ಸಾವಿರ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡುವ ವ್ಯವಸ್ಥೆ "ವಿಟಿಯು" ಮಾಡಿಕೊಂಡಿದೆ.
ಇನ್ನು ವಿಟಿಯು ಆವರಣದಲ್ಲಿ ಸದ್ಯ ಯಾವ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ ಎಂದು ನೋಡುವುದಾದರೆ. ಸಾರಸ್ ಏರೋಸ್ಪೇಸ್ ಡ್ರೋನ್ ತಂತ್ರಜ್ಞಾನ ಮತ್ತು ತಯಾರಿಕಾ ಸಂಸ್ಥೆ, ಸಿಎನ್ ಸಿ ಮಶಿನ್ ವರ್ಕಶಾಪ್, ಎಲೆಕ್ಟ್ರಿಕ್ ವೆಹಿಕಲ್ ಶಾಪ್, ಎಆರ್ ಆಂಡ್ ವಿಆರ್, ವಿಎಲ್ಎಸ್ಐ, ಪಿಸಿಬಿ ಮ್ಯಾನ್ಯುಫ್ಯಾಕ್ಚರಿಂಗ್, ಐಓಟಿ, ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದೆ. ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿಯೇ ಇಂಟರನಶಿಪ್ ನೀಡಲಾಗುತ್ತಿದೆ.
ಒಟ್ಟಿನಲ್ಲಿ "ವಿಟಿಯು" ಪಾಠದ ಜೊತೆ ಉದ್ಯೋಗ ಸಿಗುವ ನಿಟ್ಟಿನಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಸ್ಕೀಲ್ ಟ್ರೈನಿಂಗ್ ನೀಡುತ್ತಿದ್ದು, ಡಿಗ್ರಿ ಮುಗಿಸುವಷ್ಟರಲ್ಲಿ ಉದ್ಯೋಗ ಸಿಗುವ ಭರವಸೆ ವಿದ್ಯಾರ್ಥಿಗಳಲ್ಲಿ ಮುಡಿದೆ.
ಪ್ರಲ್ಹಾದ ಪೂಜಾರಿ ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
19/06/2025 02:11 pm