", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1750524728-WhatsApp-Image-2025-06-21-at-10.20.08-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ: ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಆರೋಪ ಹಾಕ್ತಿದ್ದಾರೆ....Read more" } ", "keywords": "Kalaburagi, BR Patil corruption allegations, former MLA Subhash Gutteedar statement, Karnataka politics scandal. ", "url": "https://dashboard.publicnext.com/node" }
ಕಲಬುರಗಿ: ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಆರೋಪ ಹಾಕ್ತಿದ್ದಾರೆ. 224 ಶಾಸಕರಲ್ಲೇ ಬಿ.ಆರ್. ಪಾಟೀಲ್ ಅತ್ಯಂತ ಭ್ರಷ್ಟ ಶಾಸಕ ಎಂದು ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಕಿಡಿಕಾರಿದರು.
ಬಿ.ಆರ್. ಪಾಟೀಲ್ ಹೇಳಿದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರೇ ಇದ್ದಾರೆ ಮತ್ತು ಬಿ.ಆರ್.ಪಾಟೀಲ್ ಲೆಟರ್ ಹೆಡ್ ನಲ್ಲೇ ವಸತಿ ಇಲಾಖೆಯಿಂದ ಮನೆ ಮಂಜೂರು ಮಾಡಿಕೊಂಡು ಬಂದಿದ್ದಾರೆ. ಆದ್ರೆ, ಈವಾಗ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ತಾನು ಮಾತ್ರ ಸರಿಯಾಗಿದ್ದೇನೆ ಎಂದು ಬಿಂಬಿಸೋಕೆ ಈ ರೀತಿ ಮಾಡುತ್ತಿದ್ದಾರೆ.
ಮಂತ್ರಿ ಮಂಡಲ ಬದಲಾವಣೆ ಆಗ್ತಿದೆ, ಅದಕ್ಕೆ ಈ ರೀತಿ ಮಾಡ್ತಿರಬಹುದು. ಬ್ಲ್ಯಾಕ್ ಮೇಲ್ ಮಾಡಿ ಹುದ್ದೆ ಪಡೆದುಕೊಳ್ಳೋಕೆ ಈ ರೀತಿ ಮಾಡುತ್ತಿರಬಹುದು. ಈ ಹಿಂದೆಯೂ ಅದೇ ರೀತಿ ಮಾಡಿದ್ದಾರಲ್ಲ? ಎಂದು ಲೇವಡಿ ಮಾಡಿದರು.
PublicNext
21/06/2025 10:34 pm