", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1750825386-eva.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ಗೃಹಸಚಿವರ ತವರು ಕ್ಷೇತ್ರ ತುಮಕೂರು ನಗರದಲ್ಲಿ ವಾಹನ ತಪಾಸಣೆ ನೆಪದಲ್ಲಿ ಟ್ರಾಫಿಕ್ ಪೊಲೀಸರು ಭರ್ಜರಿ ವ್ಯವಹಾರ ಕುದುರಿಸುತ್ತಿದ್ದಾರೆ....Read more" } ", "keywords": "Tumakuru, bribery case, traffic police, home minister's hometown, corruption video.", "url": "https://dashboard.publicnext.com/node" }
ತುಮಕೂರು: ಗೃಹಸಚಿವರ ತವರು ಕ್ಷೇತ್ರ ತುಮಕೂರು ನಗರದಲ್ಲಿ ವಾಹನ ತಪಾಸಣೆ ನೆಪದಲ್ಲಿ ಟ್ರಾಫಿಕ್ ಪೊಲೀಸರು ಭರ್ಜರಿ ವ್ಯವಹಾರ ಕುದುರಿಸುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಜಮೆಯಾಗುವ ಹಣಕ್ಕಿಂತ ಪೊಲೀಸರ ಜೇಬಿಗೆ ಜಮೆಯಾಗುವ ಹಣವೇ ಜಾಸ್ತಿಯಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಮಂಗಳವಾರ ಸಂಜೆ ಅಂತಹುದೇ ಘಟನೆಯೊಂದು ತುಮಕೂರು ನಗರದ ಹೃದಯ ಭಾಗದಲ್ಲಿರುವ ಕಾಲ್ಟೆಕ್ಸ್ ಸರ್ಕಲ್‌ನಲ್ಲಿ ನಡೆಯಿತು. ಟ್ರಾಫಿಕ್ ಪೊಲೀಸರು ಎಂದಿನಂತೆ ವಾಹನ ತಪಾಸಣೆ ನಡೆಸುತ್ತಿದ್ದರು. ಹೆಲ್ಮೆಟ್ ಧರಿಸದ ವ್ಯಕ್ತಿಯೊಬ್ಬರನ್ನು ಹಿಡಿದ ಪೊಲೀಸರು ದಂಡ ಕಟ್ಟುವಂತೆ ಒತ್ತಾಯಿಸುತ್ತಿದ್ದರು. ಆ ವ್ಯಕ್ತಿ ತನ್ನ ಬಳಿ 200 ರೂ ಮಾತ್ರ ಇದೆ ಎಂದಾಗ ಅದೆಲ್ಲ ಸಾಧ್ಯವಿಲ್ಲ. ದಂಡದ ಹಣ ಕಟ್ಟು ಇಲ್ಲ, ವಾಹನ ಸೀಜ್ ಮಾಡುತ್ತೇನೆ ಎಂದಾಗ ಆ ವ್ಯಕ್ತಿ ಟ್ರಾಫಿಕ್ ಪೊಲೀಸರ ಹಿಂದೆಯೇ ತೆರಳಿ ಕೈಲಿದ್ದ 200 ರೂ ಹಣ ಪೊಲೀಸರ ಕೈಗಿಟ್ಟು ತೆರಳುತ್ತಾನೆ. ನಂಬರ್ ಪ್ಲೇಟ್ ಇಲ್ಲದ ವಾಹನ ತಂದಿದ್ದ ಯುವಕರಿಗೆ ಧಮಕಿ ಹಾಕಿ 500 ರೂ ಹಣ ಪೀಕುತ್ತಾರೆ. ಈ ಎರಡೂ ಪ್ರಕರಣದಲ್ಲಿ ದಂಡದ ರಸೀದಿ ಮಾತ್ರ ನೀಡುವುದಿಲ್ಲ ಇದಿಷ್ಟೂ ವಿಡಿಯೋ ಸಂಭಾಷಣೆ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ.
ಸ್ಥಳದಲ್ಲಿಯೇ ಟ್ರಾಫಿಕ್ ಪಿಎಸ್ಐ ಇದ್ದರೂ ಸಹ ಅವರು ದಂಡ ಹಾಕದೇ ಪೊಲೀಸ್ ವಾಹನ ಚಾಲಕನಿಂದ ದಂಡ ಹಾಕುವ ಯಂತ್ರ ನೀಡಿ ದಂಡ ಹಾಕಿಸುತ್ತಿದ್ದುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಟ್ರಾಫಿಕ್ ಪೊಲೀಸ್ ರಾಜಾರೋಷವಾಗಿ ವಾಹನ ಸವಾರನಿಂದ ಹಣ ಜೇಬಿಗಿಳಿಸುವ ದೃಶ್ಯ ವೈರಲ್ ಆಗಿದೆ. ಗೃಹಸಚಿವರ ತವರು ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸರು ಸರ್ಕಾರಕ್ಕೆ ಪಂಗನಾಮ ಹಾಕಿ ಲೂಟಿಗಿಳಿದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
PublicNext
25/06/2025 09:53 am