ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ವಿದ್ಯುತ್ ತಂತಿ - ತಪ್ಪಿದ ಭಾರೀ ಅನಾಹುತ

ಶಿವಮೊಗ್ಗ : ಚಲಿಸುತ್ತಿರುವ ಬಸ್ಸಿನ ಮೇಲೆಯೇ ವಿದ್ಯುತ್ ತಂತಿ ಬಿದ್ದ ಘಟನೆಯೊಂದು ಹೊಸನಗರ ತಾಲೂಕಿನ ಹನಿಯ ಬಳಿ ನಡೆದಿದೆ.

ನಗರ ಕಡೆಯಿಂದ ಹೊಸನಗರ ಕಡೆ ಖಾಸಗಿ ಬಸ್ಸು ಹೋಗುತ್ತಿರುವಾಗ ವಿದ್ಯುತ್ ತಂತಿ ಬಿದ್ದಿದೆ. ಈ ವೇಳೆ ಚಾಲಕ ಸೇರಿದಂತೆ ಪ್ರಯಾಣಿಕರು ಆತಂಕಗೊಳ್ಳುವಂತಾಗಿತ್ತು. ಆದರೆ ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ವಿದ್ಯುತ್ ಕಂಬ ಕೂಡ ರಸ್ತೆ ಮೇಲೆ ಬಿದ್ದಿದೆ. ತಂತಿಗಳು ಕೂಡ ರಸ್ತೆ ಮೇಲೆ ಹರಡಿದ್ದವು. ಅದರ ಮೇಲೆಯೇ ವಾಹನಗಳು ಸಂಚರಿಸುತ್ತಿದ್ದವು.

Edited By :
PublicNext

PublicNext

25/06/2025 05:35 pm

Cinque Terre

23.88 K

Cinque Terre

0