", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1751295374-WhatsApp-Image-2025-06-30-at-8.26.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಿಹಾರ: ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಬೆಟ್ಟದ ಜಲಪಾತದಲ್ಲಿ ಆರು ಜನ ಹೆಂಗಳೆಯರು ನೀರಾಟ ವಾಡುತ್ತಿದ್ದು ಒಂದೇ ಸಾರಿ ಹೆಚ್ಚಿದ ನೀರಿನ ಹರಿವಿಂದ...Read more" } ", "keywords": "6 women who fell into Languria waterfall, miraculously escaped..!", "url": "https://dashboard.publicnext.com/node" } ಲಂಗುರಿಯಾ ಜಲಪಾತದಲ್ಲಿ ಜಾರಿ ಬಿದ್ದ 6 ಮಹಿಳೆಯರು, ಪಾವಾಡ ಸದೃಶ ಪಾರು..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಂಗುರಿಯಾ ಜಲಪಾತದಲ್ಲಿ ಜಾರಿ ಬಿದ್ದ 6 ಮಹಿಳೆಯರು, ಪಾವಾಡ ಸದೃಶ ಪಾರು..!

ಬಿಹಾರ: ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಬೆಟ್ಟದ ಜಲಪಾತದಲ್ಲಿ ಆರು ಜನ ಹೆಂಗಳೆಯರು ನೀರಾಟ ವಾಡುತ್ತಿದ್ದು ಒಂದೇ ಸಾರಿ ಹೆಚ್ಚಿದ ನೀರಿನ ಹರಿವಿಂದ ಸ್ವಲ್ಪದರಲ್ಲೇ ಬಚಾವ್‌ ಆಗಿದ್ದಾರೆ.ಭಾನುವಾರ ಈ ಘಟನೆ ನಡೆದಿದ್ದು ಮೊಬೈಲ್‌ ಅಲ್ಲಿ ಸೆರೆಯಾಗಿದ್ದು, ಮಳೆಗಾಲದಲ್ಲಿ ಜಲಪಾತದಲ್ಲಿ ಆಡಲು ಹೋಗುವ ಜನರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಎರಡು ನಿಮಿಷಗಳ ಈ ಕ್ಲಿಪ್‌ನಲ್ಲಿ ಮೂವರು ಮಹಿಳೆಯರು ನೀರಿನಲ್ಲಿ ಮೊದಲು ಕೊಚ್ಚಿಕೊಂಡು ಹೋಗ್ತಾರೆ ನಂತರ ಅವರನ್ನು ರಕ್ಷಣೆ ಮಾಡಲಾಗುತ್ತದೆ.ಒಬ್ಬ ಮಹಿಳೆಯನ್ನು ಬಂಡೆಯಿಂದ ಸಣ್ಣ ಹುಡುಗರು ಮೇಲೆಳೆದು ರಕ್ಷಿಸುತ್ತಾರೆ ಐದನೇ ಮಹಿಳೆಯನ್ನು ಜಲಪಾತದ ಇನ್ನೊಂದು ಬದಿಯಿಂದ ರಕ್ಷಿಸಲಾಯಿತು, ಇನ್ನೊಬ್ಬಳು ಜಲಪಾತದ ಮಧ್ಯೆ ಸಿಲುಕಿದ್ದು ನಂತರ ಗ್ರಾಮಸ್ಥರು ಆಕೆಯನ್ನು ಕೂಡ ರಕ್ಷಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಬಂಡೆಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬಳು ಗಾಯಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗಿದೆ.ಲಂಗುರಿಯಾ ಜಲಪಾತದಲ್ಲಿ ಇಷ್ಟೊಂದು ಭಾರೀ ನೀರಿನ ಹರಿವನ್ನು ನೋಡಿದ್ದು ಇದೇ ಮೊದಲು ಎಂದು ಗ್ರಾಮಸ್ಥರು ಹೇಳಿದ್ದಾರೆ.

Edited By : Shivu K
PublicNext

PublicNext

30/06/2025 08:27 pm

Cinque Terre

40.74 K

Cinque Terre

0