", "articleSection": "Lifestyle,Entertainment,Cinema,News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1750933706-Youtube-HD.00_27_25_03.Still2461~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಬ್ಯೂಟಿ ಸ್ಟೇಟ್ ಮೆಂಟ್ ಕೇಳಿದ್ರೆ ನೀವು ಬೆರಗಾಗ್ತೀರಾ.2000 ರ ವಿಶ್ವ ಸುಂದರಿ ಪ್ರಿಯಾಂಕ ಬಾಲಿವ...Read more" } ", "keywords": "Priyanka Deepika beauty standards, Priyanka Deepika beauty tips, beauty secrets for girls, Priyanka Chopra beauty, Deepika Padukone beauty, must-watch for girls beauty, Priyanka Deepika appearance, female beauty standards, celebrity beauty advice, tips for girls on beauty", "url": "https://dashboard.publicnext.com/node" }
ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಬ್ಯೂಟಿ ಸ್ಟೇಟ್ ಮೆಂಟ್ ಕೇಳಿದ್ರೆ ನೀವು ಬೆರಗಾಗ್ತೀರಾ.2000 ರ ವಿಶ್ವ ಸುಂದರಿ ಪ್ರಿಯಾಂಕ ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ತನ್ನ ಛಾಪನ್ನು ಮೂಡಿಸಿದವರು ಇನ್ನೊಬ್ಬಳು ನಮ್ಮ ಕರ್ನಾಟಕದ ಕುವರಿ ದೀಪಿಕಾ ಪಡುಕೋಣೆ ನಟನಾ ಪರಾಕ್ರಮಿ ಮಾನಸಿಕ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡುವವರು ಸೌಂದರ್ಯದ ಮಾನದಂಡಗಳ ಬಗ್ಗೆ ಇಬ್ಬರು ಸುಂದರಿಯರು ಏನು ಹೇಳ್ತಾರೆ ನೋಡೋಣ.
ಸಂದರ್ಶನವೊಂದರಲ್ಲಿ ಪ್ರಿಯಾಂಕ ಮಾತನಾಡುತ್ತಾ, ನೀವು ಸಂತೋಷವಾಗಿರಬೇಕು ಆಗ ತುಂಬಾ ಸುಂದರವಾಗಿ ಕಾಣಿಸುತ್ತೀರಿ,ಮಹಿಳೆಯರು ಕೆಲಸದ ಮಧ್ಯೆ ತಮ್ಮ ಬಗ್ಗೆಯೂ ಆದ್ಯತೆ ನೀಡಿ ಸ್ವ-ಆರೈಕೆಗೆ ಒಂದಷ್ಟು ಸಮಯ ಮೀಸಲಿಡಬೇಕು ಎಂದಿದ್ದಾರೆ.ಮತ್ತು ಮಲಗುವ ಮುಂಚೆ ಎರಡು ಬಾರಿ ಮುಖವನ್ನು ಸ್ವಚ್ಛಗೊಳಿಸಬೇಕು ಅದು ಚರ್ಮಕ್ಕೆ ಅಂಟಿಕೊಂಡಿರುವ ಮೇಕಪ್, ಮಾಲಿನ್ಯಕಾರಕಗಳನ್ನು ತೊಡೆದು ಹಾಕುತ್ತದೆ ಎಂದಿದ್ದಾರೆ.
ಇನ್ನೊಂದು ಕಡೆ ದೀಪಿಕಾ ಮುಕ್ತವಾಗಿ ಮಾನಸಿಕ ನೆಮ್ಮದಿ ಬಗ್ಗೆ ಮಾತನಾಡುತ್ತ ಇರುತ್ತಾರೆ.ನಿಜವಾದ ಸೌಂದರ್ಯವು ತಮ್ಮನ್ನು ತಾವು ಪ್ರಾಮಾಣಿಕವಾಗಿ ವ್ಯಕ್ತಪಡಿಸುವ ಸಾಮರ್ಥ್ಯದಲ್ಲಿದೆ,ಒಬ್ಬ ವ್ಯಕ್ತಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಂತ ಹಾಗೂ ತುಂಬಾ ಆತ್ಮವಿಶ್ವಾಸ ಹೊಂದಿದವರಾದರೆ ಸುಂದರವಾಗಿ ಕಾಣ್ತಾರೆ ಎಂದಿದ್ದಾರೆ.
ಇವರಿಬ್ಬರ ಮಾತು ಅಕ್ಷರಶಃ ಸತ್ಯವಲ್ಲವೇ? ಮುಖ ತುಂಬಾ ಮೇಕಪ್ ಹಾಕಿಕೊಂಡರು ಮನಸ್ಸಿನೊಳಗೆ ದುಗುಡ,ಓಂಟಿತನ, ಅನಾರೋಗ್ಯವಿದ್ದಲ್ಲಿ ಸುಂದರವಾಗಿ ಕಾಣೋದು ಅಸಾಧ್ಯವಾದದ್ದು.ಹಾಗಾಗಿ ಮುಖದ ಆರೋಗ್ಯದ ಜೊತೆ ಆರೋಗ್ಯ ಹಾಗೂ ಭಾವನಾತ್ಮಕ ವಿಚಾರಗಳಿಗೆ ಒತ್ತು ಕೊಡಿ ಅಂತಾರೆ ಈ ನಟಿಮಣಿಯರು.
PublicNext
26/06/2025 03:59 pm