", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1751010652-WhatsApp-Image-2025-06-27-at-1.20.44-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: ಹೊಟ್ಟೆಪಾಡಿಗಾಗಿ ನಗರದೊಳಗೆ ಆಟೋ ಓಡಿಸಿ ದುಡಿಯುವ ಆಟೋ ಚಾಲಕರ ಮೇಲೆ ದಬ್ಬಾಳಿಕೆ ನಡೆಸಿದರೆ ಕರವೇ ವತಿಯಿಂದ ಹೋರಾಟ ಮಾಡುವುದು ಅನಿವಾರ್ಯ ...Read more" } ", "keywords": "Udupi, auto rickshaw drivers, rowdyism, Karave leader Prabhakar, protest, Suhas Shetty murder, revenge attack, auto driver assault, sword attack, police investigation, Hiriyadka police station, Sandesh, Sushanth, arrested.", "url": "https://dashboard.publicnext.com/node" }
ಉಡುಪಿ: ಹೊಟ್ಟೆಪಾಡಿಗಾಗಿ ನಗರದೊಳಗೆ ಆಟೋ ಓಡಿಸಿ ದುಡಿಯುವ ಆಟೋ ಚಾಲಕರ ಮೇಲೆ ದಬ್ಬಾಳಿಕೆ ನಡೆಸಿದರೆ ಕರವೇ ವತಿಯಿಂದ ಹೋರಾಟ ಮಾಡುವುದು ಅನಿವಾರ್ಯ ಎಂದು ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಕರವೇ ಕಾರ್ಯಕರ್ತ , ಆಟೋ ಚಾಲಕ ಪ್ರಸಾದ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಖಂಡನೀಯ. ಕಳೆದ ಹತ್ತು ವರ್ಷಗಳಿಂದಲೂ ನಗರದಲ್ಲಿ ಈ ಗೊಂದಲ ನಡೆಯುತ್ತಲೇ ಇದೆ. ಈ ಸಂಬಂಧ ಎಸ್ಪಿಯವರ ಗಮನವನ್ನೂ ಸೆಳೆದಿದ್ದೇವೆ.
ದುಡಿದು ತಿನ್ನುವ ಆಟೋ ಚಾಲಕರು ಒಂದೇ ತಾಯಿಯ ಮಕ್ಕಳಂತೆ ಇದ್ದಾರೆ. ಆದರೂ ಇಂತಹ ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇವೆ. ನಗರದ ಒಳಗಿನ ಆಟೋ ಚಾಲಕರ ಗೊಂದಲಗಳನ್ನು ಶೀಘ್ರ ಬಗೆಹರಿಸುವ ಭರವಸೆಯನ್ನು ನೂತನ ಎಸ್ಪಿ ಕೊಟ್ಟಿದ್ದಾರೆ. ಒಂದು ವೇಳೆ ಭರವಸೆ ಈಡೇರದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಪ್ರಭಾಕರ್ ಪೂಜಾರಿ ಹೇಳಿದ್ದಾರೆ.
PublicNext
27/06/2025 01:21 pm