", "articleSection": "Crime,Government", "image": { "@type": "ImageObject", "url": "https://prod.cdn.publicnext.com/s3fs-public/235762-1751036032-Untitled-design---2025-06-27T202342.607.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಾವೇರಿ: ಮೃತಪಟ್ಟ ಬಾಲಕಿ ಎಫ್‌ಎಸ್‌ಎಲ್ ವರದಿಯನ್ನು ಖಾಸಗಿ ಆಸ್ಪತ್ರೆಯ ಪರವಾಗಿ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಡಾಕ್ಟರ್ ಮತ್ತು ಖ...Read more" } ", "keywords": "Lokayukta trap, bribery case, private hospital, FSL report, doctor arrested, corruption in Haveri, Lokayukta police action, bribe for FSL report, medical corruption, Haveri news. Lokayukta trap, bribery case, private hospital corruption, FSL report bribe, doctor arrested, corruption news, Haveri Lokayukta police, bribe allegations, medical sector corruption, Haveri incident. ", "url": "https://dashboard.publicnext.com/node" }
ಹಾವೇರಿ: ಮೃತಪಟ್ಟ ಬಾಲಕಿ ಎಫ್‌ಎಸ್‌ಎಲ್ ವರದಿಯನ್ನು ಖಾಸಗಿ ಆಸ್ಪತ್ರೆಯ ಪರವಾಗಿ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಡಾಕ್ಟರ್ ಮತ್ತು ಖಾಸಗಿ ವ್ಯಕ್ತಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ. 3 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ನ್ಯಾಯ ವೈದ್ಯಶಾಸ್ತ್ರದ ಡಾ.ಗುರುರಾಜ್ ಬಿರಾದಾರ್ ಹಾಗೂ ಶಂಕ್ರಯ್ಯ ಕುಲಕರ್ಣಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಖಾಸಗಿ ಆಸ್ಪತ್ರೆಯ ಮುಖ್ಯಸ್ಥ ಮಲ್ಲೇಶಪ್ಪ ಮಾಸಣಗಿ ಈ ಕುರಿತಂತೆ ಲೋಕಾಯುಕ್ತರಿಗೆ ದೂರು ನೀಡಿದ್ದರು. ಬಾಲಕಿ ಮೃತಪಟ್ಟ ಎಫ್‌ಎಸ್‌ಎಲ್ ವರದಿ ಆಸ್ಪತ್ರೆಯ ಪರವಾಗಿ ಮಾಡಲು ವೈದ್ಯ ಮತ್ತು ಖಾಸಗಿ ವ್ಯಕ್ತಿ 5 ಲಕ್ಷ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇಂದು 3 ಲಕ್ಷ ರೂಪಾಯಿ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ನ್ಯಾಯ ವೈದ್ಯಶಾಸ್ತ್ರ ಸಹಪ್ರಾಧ್ಯಾಪಕ ಗುರುರಾಜ್ ಬಿರಾದಾರ. ಹಾಗೂ ಖಾಸಗಿ ವ್ಯಕ್ತಿ ಶಂಕ್ರಯ್ಯ ಕುಲಕರ್ಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿಎಸ್‌ಪಿ ಮಧುಸೂದನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
27/06/2025 08:24 pm