", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/222042-1751074552-WhatsApp-Image-2025-02-14-at-7.16.19-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ ರಾಶಿ: ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ. ಕಾನೂನು ವಿಷಯಗಳು ಜಟಿಲವಾಗುತ್ತದೆ. ಬಂಧುಗಳ ಮಾತಿನಿಂದ ಬೇಸರ ಆಗಬಹುದು. ಮಡದಿ, ಮಕ್ಕಳೊ...Read more" } ", "keywords": "Daily horoscope June 28 2025, astrological predictions, zodiac signs, Aries horoscope, Taurus horoscope, Gemini horoscope, Cancer horoscope, Leo horoscope, Virgo horoscope, Libra horoscope, Scorpio horoscope, Sagittarius horoscope, Capricorn horoscope, Aquarius horoscope, Pisces horoscope, lucky numbers, lucky colors, ", "url": "https://dashboard.publicnext.com/node" } ದಿನ ಭವಿಷ್ಯ: 28-06-2025
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 28-06-2025

ಮೇಷ ರಾಶಿ: ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ. ಕಾನೂನು ವಿಷಯಗಳು ಜಟಿಲವಾಗುತ್ತದೆ. ಬಂಧುಗಳ ಮಾತಿನಿಂದ ಬೇಸರ ಆಗಬಹುದು. ಮಡದಿ, ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ. ಅಪರಿಚಿತರನ್ನು ನಂಬಿದರೆ ದ್ರೋಹ ಆಗಬಹುದು.

ವೃಷಭ: ವೈವಾಹಿಕ, ದಾಂಪತ್ಯದಲ್ಲಿ ಗೊಂದಲ ಉಂಟಾಗಬಹುದು. ಬೇರೆಯವರ ಬಗ್ಗೆ ವಿಚಾರ ಮಾಡದೇ ಯಾರೊಂದಿಗೂ ಸ್ನೇಹ ಬೇಡ. ವಿದೇಶ ಪ್ರವಾಸದಲ್ಲಿ ತೊಂದರೆಯಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಇಂದು ಕಿರಿಯರನ್ನು ಗೌರವಿಸಿ.

ಮಿಥುನ: ಈ ದಿನ ಅಂದುಕೊಂಡ ಕಾರ್ಯವನ್ನು ಸಾಧಿಸುತ್ತೀರಿ. ಆತ್ಮೀಯರಿಂದ ಬೇಸರ ಅಗಬಹುದು. ಹಳೆಯ ಸಮಸ್ಯೆ ಬಗೆಹರಿಯುವ ದಿನ. ಈ ದಿನ ನಿಮಗೆ ಕುಟುಂಬದವರ ಬೆಂಬಲವಿರುತ್ತದೆ. ಉದ್ಯೋಗ ಬದಲಾವಣೆಯ ಅವಕಾಶವಿದೆ.

ಕಟಕ: ಮೇಲಾಧಿಕಾರಿಗಳಿಂದ ಹೊಗಳಿಕೆ ಸಿಗಲಿದೆ. ಹೊಟ್ಟೆಯ ಉರಿ, ನೋವು ಕಾಣಬಹುದು. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ತುಂಬಾ ಸೋಮಾರಿತನ ಕಾಡಬಹುದು. ಮಾನಸಿಕ ಭಯ ಉಂಟಾಗಬಹುದು.

ಸಿಂಹ: ಸಂತೋಷದಿಂದ ಈ ದಿನ ಕಳೆಯುತ್ತೀರಿ. ಸಮಯದ ದುರುಪಯೋಗ ಆಗಬಹುದು. ಹಿರಿಯರ, ಅಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ. ವ್ಯಾಪಾರ ನಿಮಿತ್ತ ಪ್ರವಾಸ ಕೈಗೊಳ್ಳುತ್ತೀರಿ. ಅಪೂರ್ಣ ಕಾರ್ಯಗಳ ಬಗ್ಗೆ ಚಿಂತನೆ ಶುಭ.

ಕನ್ಯಾ: ಅಗತ್ಯವಾಗಿ ಕೆಲವರ ಕೆಲಸಗಳನ್ನು ಮಾಡಬೇಕಾಗುತ್ತದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ. ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು. ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕು. ಬೆನ್ನು ನೋವಿನಿಂದ ಸಮಸ್ಯೆಯಾಗಬಹುದು.

ತುಲಾ: ಕಮಿಷನ್ ಏಜೆಂಟ್​ಗಳಿಗೆ ಲಾಭವಿದೆ. ಪ್ರತಿಭೆಗೆ ತಕ್ಕ ಪ್ರತಿಫಲ ಸಿಕ್ಕಿ ಸಂತೋಷ ಆಗಲಿದೆ. ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗಬಹುದು. ಗಂಭೀರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ. ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಇರಲಿದೆ.

ವೃಶ್ಚಿಕ: ಕಲಾ ರಸಿಕರಿಗೆ ಉತ್ತಮ ಸಮಯ. ತಂದೆಯ ಸಲಹೆ ಪಡೆಯಿರಿ ಒಳಿತಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ. ಮನೆಯ ಅಲಂಕಾರ, ನವೀಕರಣಕ್ಕೆ ಖರ್ಚು ಆಗಲಿದೆ. ಮಾನಸಿಕವಾಗಿ ಒತ್ತಡದ ದಿನ.

ಧನಸ್ಸು : ನವದಂಪತಿಗಳಿಗೆ ಪ್ರವಾಸದ ಯೋಗ. ಸಣ್ಣ ಪುಟ್ಟ ವಿಚಾರಗಳಲ್ಲಿ ಗೊಂದಲವಾಗಬಹುದು. ವೃತ್ತಿಯಲ್ಲಿ ಬಡ್ತಿ ಸಿಗಲಿದೆ. ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅದಾಯ ಸಿಗಲಿದೆ.

ಮಕರ: ಮಕ್ಕಳ ಪ್ರಗತಿಯ ಬಗ್ಗೆ ಚಿಂತಿಸಿ. ನೀರಿನ ಭಯ, ಜಲಕಂಟಕ ಎದುರಾಗಬಹುದು ಎಚ್ಚರವಿರಲಿ. ಹೆಚ್ಚು ಹಣದ ವ್ಯಯವಾಗಬಹುದು. ಆದಾಯ ಗಮನಿಸದೆ ಖರ್ಚಿಗೆ ಮುಂದಾಗಬಾರದು. ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ.

ಕುಂಭ: ನಿಮ್ಮ ಶಿಸ್ತು, ಸ್ವಭಾವ ಬೇರೆಯವರಿಗೆ ಮಾದರಿ. ವಿವಾಹಿತರು ಜಗಳ ಮಾಡಿಕೊಳ್ಳಬಾರದು. ಕುಟುಂಬದ ವಾತಾವರಣ ಶಾಂತವಾಗಿರುತ್ತದೆ. ಹಿರಿಯರ ಬೆಂಬಲ ದೊರಕುತ್ತದೆ. ಪ್ರೇಮಿಗಳಿಗೆ ಅವಮಾನ ಆಗಬಹುದು.

ಮೀನ : ಇಂದು ಧನಾತ್ಮಕವಾಗಿ ಚಿಂತಿಸಿ. ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರದಿರಿ. ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಿ. ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಅಧಿಕಾರಿಗಳೊಂದಿಗೆ ಮಾತುಕತೆ ಚೆನ್ನಾಗಿರುತ್ತದೆ.

Edited By : Vijay Kumar
PublicNext

PublicNext

28/06/2025 07:06 am

Cinque Terre

14.21 K

Cinque Terre

0