", "articleSection": "Astrology", "image": { "@type": "ImageObject", "url": "https://prod.cdn.publicnext.com/s3fs-public/463655-1751172111-manjunath---2025-06-23T071333.867.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮೇಷ: ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ. ಮನೆ...Read more" } ", "keywords": ""June 29 2025 horoscope, daily predictions, astrology news, zodiac signs forecast, astrological insights" ", "url": "https://dashboard.publicnext.com/node" }
ಮೇಷ: ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ.
ವೃಷಭ: ಸಂಸಾರದ ವಿಷಯಗಳತ್ತ ಗಮನ ಹರಿಸುವಿರಿ. ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕತೆಯನ್ನು ಉಪಯೋಗಿಸಿಕೊಳ್ಳುವರು, ಫಲವಾಗಿ ಸಮಾಜ ದಲ್ಲಿ ಗಮನಾರ್ಹ ವ್ಯಕ್ತಿಯಾಗುವಿರಿ. ಸಹವರ್ತಿಗಳು ಬೆಂಬಲ ನೀಡುವರು.
ಮಿಥುನ: ವೃತ್ತಿ ಅಥವಾ ಕೆಲಸಗಳಲ್ಲಿ ಬದಲಾವಣೆ ಸನ್ನಿಹಿತವಾಗಲಿದೆ. ಸಮಾನ ಮನಸ್ಕರ ಜೊತೆಗಿನ ವ್ಯವಹಾರದಲ್ಲಿ ಮಾನಸಿಕ ಭಿನ್ನಾಭಿಪ್ರಾಯಗಳು ಉದ್ಭವ ವಾಗಲಿದೆ. ಸ್ನೇಹಿತರೊಂದಿಗೆ ಕ್ಲಿಷ್ಟಕರ ಕ್ಷಣಗಳನ್ನು ಕಳೆಯುವಂತಾಗಲಿದೆ.
ಕರ್ಕಾಟಕ: ಹೆಚ್ಚಿನ ಕ್ರಿಯಾತ್ಮಕ ಶಕ್ತಿ ಇದೆ ಆದರೆ ಕೆಲಸಗಳು ಕಾರ್ಯಗತ ವಾಗಲು ಆತುರ ತೋರಬೇಡಿ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇತರ ವಿಷಯಗಳಿಗೂ ಪ್ರಾಮುಖ್ಯತೆ ನೀಡಿ. ದಲ್ಲಾಳಿಗಳಿಗೆ ತೃಪ್ತಿಕರ ದಿನವಾಗುವುದು.
ಸಿಂಹ: ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಅತಿಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಆಕಸ್ಮಿಕ ಧನಲಾಭ ಉಂಟಾಗಲಿದೆ. ಹೊಸ ಜವಾಬ್ದಾರಿ ಯನ್ನು ವಹಿಸಿಕೊಳ್ಳಬೇಕಾಗುವುದು. ಪ್ರಾಮಾಣಿಕತೆಗೆ ಅಡ್ಡಿ ಉಂಟಾಗುವುದು.
ಕನ್ಯಾ: ಸಮಸ್ಯೆ ಪರಿಸಿಕೊಳ್ಳಲು ಸೂಕ್ತ ಸಲಹೆ ಪಡೆಯುವುದು ಉತ್ತಮ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿನ ಭಿನ್ನಾಭಿಪ್ರಾಯ ದೂರಾವಾಗುವುದು. ಕಬ್ಬಿಣ ವ್ಯಾಪಾರಸ್ಥರಿಗೆ ಆಶಾದಾಯಕ ದಿನ.
ತುಲಾ: ಯೋಜನೆಗಳು ಕಾರ್ಯಗತಗೊಳ್ಳುವುದರ ಬಗ್ಗೆ ಶನೈಶ್ಚರನ ಆರಾಧನೆ ಮಾಡುವುದು ಉತ್ತಮ. ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಹೆಚ್ಚಿನ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.
ವೃಶ್ಚಿಕ: ವಾಣಿಜ್ಯ ವ್ಯವಹಾರಗಳ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಮಾಡುವ ನಿಮ್ಮ ಕೆಲಸದಲ್ಲಿ ವಿಘ್ನ ಇರಲಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹುಟ್ಟುವರು.
ಧನು: ನಿಮ್ಮ ಪ್ರಿಯಕರನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಮಕರ: ನೆಮ್ಮದಿಯ ವಿಷಯವೇನೆಂದರೆ ಧನಾಗಮದಲ್ಲಿ ಚಿಂತೆ ಇರದು. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ. ಇಂದು ಹಳೇ ಬಾಕಿ ಸಂದಾಯವಾಗುವುದು. ಸಂಜೆಯ ಸಮಯದಲ್ಲಿ ಶಿರೋವೇದನೆ ಕಾಡಲಿದೆ.
ಕುಂಭ: ಹಣಕಾಸು ಪರಿಸ್ಥಿತಿಗಳು ಉತ್ತಮಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತಯಾರಿ ನಡೆಸಿಕೊಳ್ಳಿ. ಕೆಲಸದಲ್ಲಿ ಬದಲಾವಣೆ ಬಯಸಿದ್ದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ.
ಮೀನ: ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿದೆ. ವಾಹನ ಮಾರಾಟಗಾರರಿಗೆ ಉತ್ತಮ ಆದಾಯ ಲಭ್ಯ.
PublicNext
29/06/2025 10:12 am