", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/222042-1751103048-Canva---2025-06-28T150040.936.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಿನಿಪ್ರಿಯರ ಗಮನ ಸೆಳೆದಿರುವ ಅಂದೊಂದಿತ್ತು ಕಾಲ ಚಿತ್ರದ ಎರಡನೇ ಹಾಡು ಅರೇರೇ ಯಾರೋ ಇವಳು... ಬಿಡುಗಡೆಯಾಗಿದೆ. ಮಲ್ಲಸಂದ್ರದ ಬಿ.ಎನ್.ಆರ್. ...Read more" } ", "keywords": "Andondittu Kaala song release, Are Re Yaro Ivalu song, Kannada film industry, student event, new Kannada song, movie promotion, Kannada music launch, film song unveiling, Andondittu Kaala movie news. ", "url": "https://dashboard.publicnext.com/node" } ಅಂದೊಂದಿತ್ತು ಕಾಲ ಚಿತ್ರದ 2ನೇ ಹಾಡು 'ಅರೇರೇ ಯಾರೋ ಇವಳು..' ವಿದ್ಯಾರ್ಥಿಗಳಿಂದಲೇ ರಿಲೀಸ್‌
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂದೊಂದಿತ್ತು ಕಾಲ ಚಿತ್ರದ 2ನೇ ಹಾಡು 'ಅರೇರೇ ಯಾರೋ ಇವಳು..' ವಿದ್ಯಾರ್ಥಿಗಳಿಂದಲೇ ರಿಲೀಸ್‌

ಸಿನಿಪ್ರಿಯರ ಗಮನ ಸೆಳೆದಿರುವ ಅಂದೊಂದಿತ್ತು ಕಾಲ ಚಿತ್ರದ ಎರಡನೇ ಹಾಡು 'ಅರೇರೇ ಯಾರೋ ಇವಳು...' ಬಿಡುಗಡೆಯಾಗಿದೆ. ಮಲ್ಲಸಂದ್ರದ ಬಿ.ಎನ್.ಆರ್. ಪಬ್ಲಿಕ್ ಸ್ಕೂಲ್‌ನ 10ನೇ ತರಗತಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳು ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಮೊದಲ ಹಾಡು 'ಮುಂಗಾರು ಮಳೆಯಲ್ಲಿ...' ಈಗಾಗಲೇ ಯೂಟ್ಯೂಬ್‌ನಲ್ಲಿ 36.4 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಯಶಸ್ವಿಯಾಗಿದೆ.

ಚಿತ್ರತಂಡ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ವಿನಯ್ ರಾಜ್‌ಕುಮಾರ್ ಮಾತನಾಡಿ, ಮೊದಲ ಹಾಡಿನ ಯಶಸ್ಸು ತಂಡಕ್ಕೆ ಖುಷಿ ತಂದಿದೆ. ಅರೇರೇ ಯಾರೋ ಇವಳು... ನನ್ನ ಅಚ್ಚುಮೆಚ್ಚಿನ ಹಾಡು. 16 ವರ್ಷದ ಹುಡುಗನ ಪಾತ್ರಕ್ಕಾಗಿ ತೂಕ ಇಳಿಸುವುದು ಸವಾಲಾಗಿತ್ತು, ಆದರೆ ಹಾಡು ಅದ್ಭುತವಾಗಿ ಮೂಡಿಬಂದಿದೆ. ನಾನು ಶಾಲಾ ದಿನಗಳಲ್ಲಿ ಮುಗ್ಧ ಹುಡುಗನಾಗಿದ್ದೆ. ಮೂರು ಶೇಡ್‌ಗಳಲ್ಲಿ ನನ್ನ ಪಾತ್ರ ಸಾಗುತ್ತದೆ ಎಂದರು.

ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡಿ, ನಿರ್ಮಾಪಕ ಭುವನ್ ಸುರೇಶ್ ಅವರ ಬೆಂಬಲದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ವಿನಯ್ ರಾಜ್‌ಕುಮಾರ್ ಅವರ ಸಹಕಾರ ಮತ್ತು ಸೈಲೆಂಟ್ ವ್ಯಕ್ತಿತ್ವ ನಿಜಕ್ಕೂ ಶ್ಲಾಘನೀಯ. ಆಗಸ್ಟ್ 29ರಂದು ಚಿತ್ರ ಬಿಡುಗಡೆಯಾಗಲಿದ್ದು, ಇದು ಪ್ರೀತಿ ಮತ್ತು ಗೆಳೆತನದ ಕಥೆಯಾಗಿದೆ,ಎಂದು ತಿಳಿಸಿದರು.

ನಿರ್ಮಾಪಕ ಭುವನ್ ಸುರೇಶ್ ಮತ್ತು ಸಂಗೀತ ನಿರ್ದೇಶಕ ರಾಘವೇಂದ್ರ.ವಿ ಸಹ ಹಾಡಿನ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಿಶಾ ರವಿಕೃಷ್ಣನ್ ಈ ಹಾಡಿನಲ್ಲಿ ವಿನಯ್ ರಾಜ್‌ಕುಮಾರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅರೇರೇ ಯಾರೋ ಇವಳು... ಹಾಡು 90ರ ದಶಕದ ಕಥಾವಸ್ತುವನ್ನು ಹೊಂದಿದೆ. ವಿನಯ್ ರಾಜ್‌ಕುಮಾರ್ ಮತ್ತು ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಇದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಬೆಂಗಳೂರು ಮತ್ತು ತೀರ್ಥಹಳ್ಳಿಯಲ್ಲಿ ನಡೆದಿದೆ.

Edited By : Vijay Kumar
PublicNext

PublicNext

28/06/2025 03:01 pm

Cinque Terre

19.22 K

Cinque Terre

0