", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/454738-1751106518-New-(1280-x-720-px)-(26).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "Harish.K" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು ಬಳಿ 50 ದಿನ ಶೂಟಿಂಗ್ ಸು ಫ್ರಮ್ ಸೋ ಚಿತ್ರ ಬಹುದೂರ ಪ್ರಯತ್ನ ಡ್ಯಾಂಕ್ಸ್ ಅಂಥಮ್ ವೈರಲ್ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂ...Read more" } ", "keywords": "Su From So Song Release: Raj B Shetty's new song out on July 25", "url": "https://dashboard.publicnext.com/node" } ರಾಜ್ ಬಿ ಶೆಟ್ಟಿ ಬರೆದ ಸು ಫ್ರಮ್ ಸೋ ಸಾಂಗ್ ಜುಲೈ 25 ಕ್ಕೆ ರಿಲೀಸ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ ಬಿ ಶೆಟ್ಟಿ ಬರೆದ ಸು ಫ್ರಮ್ ಸೋ ಸಾಂಗ್ ಜುಲೈ 25 ಕ್ಕೆ ರಿಲೀಸ್

ಮಂಗಳೂರು ಬಳಿ 50 ದಿನ ಶೂಟಿಂಗ್ ಸು ಫ್ರಮ್ ಸೋ ಚಿತ್ರ ಬಹುದೂರ ಪ್ರಯತ್ನ ಡ್ಯಾಂಕ್ಸ್ ಅಂಥಮ್ ವೈರಲ್

ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಿಸಿರುವ ಸು ಫ್ರಮ್ ಸೋ ಎಂಬ ಹೊಸ ಕನ್ನಡ ಸಿನಿಮಾದ ಡ್ಯಾಂಕ್ಸ್ ಅಂಥಮ್ ಹಾಡು ಬಿಡುಗಡೆ ಆಗಿದ್ದು, ಬಹಳ ಜನಪ್ರಿಯವಾಗಿದೆ. ಮುಂದೆ ಎಲ್ಲ ಪಾರ್ಟಿ ಮತ್ತು ಕಾರ್ಯಕ್ರಮಗಳಲ್ಲಿ ಈ ಹಾಡು ಕೇಳಲು ಸಾಧ್ಯ ಅಂತೂ ಕಾಣುತ್ತಿದೆ.

ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ಅನುರಾಗ್ ಕುಲಕರ್ಣಿ ತಮ್ಮ ಸೊಗಸಾದ ಧ್ವನಿಯಲ್ಲಿ ಹಾಡಿದ್ದಾರೆ ಮತ್ತು ಸುಮೇಧ್ ಕೆ ಉತ್ತಮ ಸಂಗೀತ ನೀಡಿದ್ದಾರೆ. ನೃತ್ಯ ಸಂಯೋಜನೆ ವಿನಾಯಕ ಆಚಾರ್ಯ ಅವರದ್ದು.

ಹಾಡಿನಲ್ಲಿ ಜೆಪಿ ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮತ್ತು ಇನ್ನಿತರ ಕಲಾವಿದರು ಹೆಜ್ಜೆ ಹಾಕಿದ್ದಾರೆ.ಸು ಫ್ರಮ್ ಸೋ ಸಿನಿಮಾವನ್ನು ಜೆಪಿ ತುಮಿನಾಡು ತಮ್ಮ ಮೊದಲ ನಿರ್ದೇಶನ ಪ್ರಯೋಗವಾಗಿ ಮಾಡಿದ್ದು, ಅವರು ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಛಾಯಾಗ್ರಹಣ ಎಸ್ ಚಂದ್ರಶೇಖರನ್ ಅವರದ್ದು.

ಚಿತ್ರದ ನಿರ್ಮಾಪಕರು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ಮತ್ತು ರಾಜ್ ಬಿ ಶೆಟ್ಟಿ ಸೇರಿ ಅದ್ಧೂರಿಯಾಗಿ ಮಾಡಿದ್ದು, ಹಿನ್ನೆಲೆ ಸಂಗೀತ ಸಂದೀಪ್ ತುಳಸಿದಾಸ್ ನೀಡಿದ್ದಾರೆ. ಸಾಹಸ ಸಂಯೋಜನೆ ಅರ್ಜುನ್ ರಾಜ್ ಅವರದ್ದಾಗಿದೆ.

ಮಂಗಳೂರು ಸುತ್ತಮುತ್ತಿನ ವೇಣೂರು, ಕಕ್ಯಪದವು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 50 ದಿನ ಶೂಟಿಂಗ್ ನಡೆದಿದೆ. ಈ ಸಿನಿಮಾ ಜುಲೈ 25 ರಂದು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.

Edited By :
PublicNext

PublicNext

28/06/2025 04:00 pm

Cinque Terre

15.58 K

Cinque Terre

0