", "articleSection": "Crime,Law and Order,International", "image": { "@type": "ImageObject", "url": "https://prod.cdn.publicnext.com/s3fs-public/229640-1751130878-we.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಟ್ವಿಟ್ಟರ್‌ ಮೂಲಕ ನೋವಲ್ಲಿರುವ ಜನರಿಗೆ ಸಹಾನುಭೂತಿ ಹುಟ್ಟಿಸಿ ಸಾಯಲು ಪ್ರೇರೇಪಿಸಿ ಒಂಭತ್ತು ಜನರ ಸಾವಿಗೆ ಕಾರಣವಾದ ಜಪಾನ್ ನ ತಕಹಿರೋ ಶಿರೈಶಿ ಯ...Read more" } ", "keywords": "Haunted house serial killer, Sex and Kill series, Twitter killer story, death penalty serial killer, crime story Twitter killer.", "url": "https://dashboard.publicnext.com/node" } ʼಹಾಂಟೆಡ್‌ ಹೌಸ್ʼ, ಸೆಕ್ಸ್‌ ಆಂಡ್‌ ಕಿಲ್‌ ಸರಣಿ ಹಂತಕನಿಗೆ ಗಲ್ಲು ಶಿಕ್ಷೆ, ಟ್ವಿಟ್ಟರ್‌ ಕಿಲ್ಲರ್‌ ನ ಭಯಾನಕ ಕಥೆ ಇದು..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ʼಹಾಂಟೆಡ್‌ ಹೌಸ್ʼ, ಸೆಕ್ಸ್‌ ಆಂಡ್‌ ಕಿಲ್‌ ಸರಣಿ ಹಂತಕನಿಗೆ ಗಲ್ಲು ಶಿಕ್ಷೆ, ಟ್ವಿಟ್ಟರ್‌ ಕಿಲ್ಲರ್‌ ನ ಭಯಾನಕ ಕಥೆ ಇದು..!

ಟ್ವಿಟ್ಟರ್‌ ಮೂಲಕ ನೋವಲ್ಲಿರುವ ಜನರಿಗೆ ಸಹಾನುಭೂತಿ ಹುಟ್ಟಿಸಿ ಸಾಯಲು ಪ್ರೇರೇಪಿಸಿ ಒಂಭತ್ತು ಜನರ ಸಾವಿಗೆ ಕಾರಣವಾದ ಜಪಾನ್ ನ ತಕಹಿರೋ ಶಿರೈಶಿ ಯನ್ನು ನಿನ್ನೆ ಗಲ್ಲಿಗೇರಿಸಲಾಗಿದೆ. 15 ರಿಂದ 26 ವರ್ಷ ವಯಸ್ಸಿನ ಎಂಟು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಒಟ್ಟು ಒಂಭತ್ತು ಜನ ಈತನಿಂದ ಸತ್ತಿದ್ದಾರೆ. ಟ್ವಿಟರ್‌ನಲ್ಲಿ ತನ್ನನ್ನು ತಾನು "ಹ್ಯಾಂಗ್‌ಮ್ಯಾನ್" ಎಂದು ಕರೆದುಕೊಳ್ಳುತ್ತಿದ್ದ ಈತ ಜಪಾನ್‌ನ ಅತ್ಯಂತ ಕ್ರೂರ ಸರಣಿ ಹಂತಕರಲ್ಲಿ ಒಬ್ಬ.

34 ವರ್ಷದ ಈತನನ್ನು ಟೋಕಿಯೊ ಬಂಧನ ಮನೆಯಲ್ಲಿ ರಹಸ್ಯವಾಗಿ ಮರಣದಂಡನೆ ಶಿಕ್ಷೆ ವಿಧಿಸಿ ನಂತರ ಆ ಸುದ್ದಿಯನ್ನು ಅಲ್ಲಿನ ಸರಕಾರ ಘೋಷಿಸಿತು.ಈತನ ಪ್ರೋಫೈಲ್‌ ನಲ್ಲಿ ನಾನು "ನಿಜವಾಗಿಯೂ ನೋವಿನಲ್ಲಿರುವ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ. ದಯವಿಟ್ಟು ನನಗೆ ಯಾವಾಗ ಬೇಕಾದರೂ DM ಮಾಡಿ." ಎಂದು ಬರೆದುಕೊಂಡಿದ್ದ.

2017 ರ ಅಕ್ಟೋಬರ್‌ನಲ್ಲಿ ಮಹಿಳೆಯೊಬ್ಬಳು ಕಾಣೆಯಾದಾಗ ಈತನ ಅಪಾರ್ಟ್ಮೆಂಟ್‌ನಲ್ಲಿ ದೇಹದ ಭಾಗಗಳನ್ನು ಕೂಲರ್‌ಗಳು ಮತ್ತು ಟೂಲ್‌ಬಾಕ್ಸ್‌ಗಳಲ್ಲಿ ಸಂಗ್ರಹಣೆ ಮಾಡಿ ಇಟ್ಟಿರುವುದು ಪತ್ತೆಯಾಗಿ ನಂತರ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯರನ್ನು ತನ್ನ ಮನೆಗೆ ಕರೆದು ಅವರನ್ನು ರೇಪ್‌ ಮಾಡಿ ನಂತರ ಕೊಲೆ ಮಾಡುತ್ತಿದ್ದ ಎನ್ನಲಾಗಿದೆ ಹೀಗೆ ಎಂಟು ಹೆಣ್ಣು ಮಕ್ಕಳನ್ನು ಕೊಂದರೆ ಒಬ್ಬ ಪುರುಷ ಅವರಲ್ಲೇ ಒಂದು ಮಹಿಳೆಯ ಬಾಯ್‌ ಫ್ರೆಂಡ್‌ ಎನ್ನಲಾಗಿದೆ. ಆ ಮನೆಯನ್ನು ಜಪಾನೀ ಮೀಡಿಯಾ ಹಾಂಟೆಡ್‌ ಹೌಸ್(‌ ಭಯಾನಕ ಮನೆ) ಎಂದು ಕರೆದಿದ್ದಾರೆ.

ಶಿರೈಶಿ ಪರ ವಕೀಲರು ನೋವಲ್ಲಿದ್ದು ಆತ್ಮಹತ್ಯೆ ಮಾಡಲು ಯತ್ನಿಸಿದ್ದವರನ್ನಷ್ಟೇ ಈತ ಸಂಪರ್ಕಿಸುತ್ತಿದ್ದ ಹಾಗಾಗಿ ಇದು ಅನುಮತಿಯ ಸಾವು ಎಂದು ವಕಾಲತ್ತು ವಹಿಸಿದ್ದರು,ಇದಕ್ಕೆಲ್ಲ ಮಣೆ ಹಾಕದ ನ್ಯಾಯಾಲಯ ಈತ ನಂಬಿಸಿ ಮೋಸ ಮಾಡಿ ಲೈಂಗಿಕವಾಗಿ ಬಳಸಿಕೊಂಡು ಕೊಲೆ ಮಾಡಿದ್ದಾನೆ ಎಂದು ತೀರ್ಪು ನೀಡಿ ಗಲ್ಲು ಶಿಕ್ಷೆ ವಿಧಿಸಿದೆ.

Edited By : Manjunath H D
PublicNext

PublicNext

28/06/2025 10:44 pm

Cinque Terre

83.56 K

Cinque Terre

0