", "articleSection": "Health & Fitness,Crime", "image": { "@type": "ImageObject", "url": "https://prod.cdn.publicnext.com/s3fs-public/286525-1751283934-WhatsApp-Image-2025-06-30-at-5.15.08-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಹಿಳೆಯೊಬ್ಬಳು ಮೂತ್ರದಿಂದ ಕಣ್ಣು ತೊಳೆದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈದ್ಯಕೀಯ ವೃತ್ತಿಪರರು ಸಿಟ್ಟಿಗೆದ್ದಿದ್ದಾರೆ. ಮೂ...Read more" } ", "keywords": "Urine used for eye wash, video post sparks outrage, doctors condemn practice, eye care controversy, unhygienic practices.", "url": "https://dashboard.publicnext.com/node" }
ಮಹಿಳೆಯೊಬ್ಬಳು ಮೂತ್ರದಿಂದ ಕಣ್ಣು ತೊಳೆದು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈದ್ಯಕೀಯ ವೃತ್ತಿಪರರು ಸಿಟ್ಟಿಗೆದ್ದಿದ್ದಾರೆ. ಮೂತ್ರ ಕಣ್ಣಿನ ಆರೈಕೆಗೆ ಸುರಕ್ಷಿತವಲ್ಲ ಮತ್ತು ಕಿರಿಕಿರಿ, ಸೋಂಕು ಮತ್ತು ದೃಷ್ಟಿ ನಷ್ಟ ಉಂಟಾಗುತ್ತದೆ ಈ ವೀಡಿಯೋದಿಂದ ಉತ್ತೇಜನಗೊಳಗಾಗಬೇಡಿ ಎಂದಿದ್ದಾರೆ.
ಪುಣೆಯ ನೂಪುರ್ ಪಿಟ್ಟಿ ಎನ್ನವವರು “medicine-free life coach”( "ಔಷಧ-ಮುಕ್ತ ಜೀವನ ತರಬೇತುದಾರ) ಎಂಬ ಪೇಜ್ ನಲ್ಲಿ ಮೂತ್ರವನ್ನು ಎರಡೂ ಕಪ್ ನಲ್ಲಿ ತೆಗೆದುಕೊಂಡು ಕಣ್ಣನ್ನು ತೊಳೆದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ ಅದಕ್ಕೆ ಬೆಳಗಿನ ಮೊದಲ ಮೂತ್ರವು ಕಣ್ಣುಗಳ ಕೆಂಪು, ಶುಷ್ಕತೆ ಮತ್ತು ಕಿರಿಕಿರಿಯಂತಹ ಲಕ್ಷಣಗಳನ್ನು ನಿವಾರಿಸುತ್ತದೆ ಎಂದು ಅಡಿ ಬರಹ ಕೊಟ್ಟಿದ್ದಾರೆ. ಜನ ಈ ವೀಡಿಯೋ ನೋಡಿ ಹಿಗ್ಗಾ ಮುಗ್ಗಾ ಬೈಯಲು ಶುರು ಮಾಡಿದ್ದೇ ತಡ ವೀಡಿಯೋ ಡಿಲೀಟ್ ಆಗಿದೆ.
ಎಂದಿಗೂ ಎಂದಿಗೂ ಇದನ್ನು ಎಂದಿಗೂ ಮಾಡಬೇಡಿ, ಮೂತ್ರವು ಶೌಚಾಲಯದಲ್ಲಿರಬೇಕು, ನಿಮ್ಮನ್ನ ನೀವು ನೋಯಿಸಕೊಳ್ಳಬೇಡಿ ಎಂದು ಮೂತ್ರಶಾಸ್ತ್ರಜ್ಞ ಡಾ. ಜೈಸನ್ ಫಿಲಿಪ್ X ನಲ್ಲಿ ಎಚ್ಚರಿಸಿದ್ದಾರೆ.ಇದರ ಜೊತೆಗೆ ಕಣ್ಣನ್ನು ರಕ್ಷಿಸಿಕೊಳ್ಳಲು ಹಲವು ಟಿಪ್ಸ್ ಕೊಟ್ಟಿದ್ದಾರೆ.
೧.ಧೂಳು ಅಥವಾ ಕಿರಿಕಿರಿಯುಂಟುಮಾಡುವ ವಸ್ತುಗಳಿಗೆ ಕಣ್ಣಿಗೆ ಸಮಸ್ಯೆಯಾದಾಗ ಸ್ಟೆರೈಲ್ ಲವಣಯುಕ್ತ ದ್ರಾವಣವನ್ನು ಬಳಸಬೇಕು
೨. ಸ್ಕ್ರೀನ್ ಇಂದ ಆಗುವ ಕಣ್ಣಿನ ಒತ್ತಡ ಹಾಗೂ ಡ್ರೈ ನೆಸ್ ಇಂದ ಕಣ್ಣನ್ನು ರಕ್ಷಿಸಲು ಕೆಲಸದ ಮಧ್ಯೆ ಕಣ್ಣಿಗೆ ವಿರಾಮ, ನೀಡಬೇಕು
೩.ಸ್ವಚ್ಛ ವಾತಾವರಣ ಇಟ್ಟುಕೊಳ್ಳಬೇಕು ಹಾಗೂ ಕಣ್ಣುಗಳನ್ನು ಉಜ್ಜಿಕೊಳ್ಳಬಾರದು
೪.ರೋಗಲಕ್ಷಣಗಳು ಹದಗೆಟ್ಟರೆ ನೇತ್ರಶಾಸ್ತ್ರಜ್ಞರನ್ನು ಭೇಟಿ ಮಾಡಬೇಕು.
PublicNext
30/06/2025 05:15 pm