ಫರೀದಾಬಾದ್: ಈ ವೀಡಿಯೋ ನೋಡಿದ್ರೆ ಇವಳೇನು ಮನುಷ್ಯಳೋ ಅಥವಾ ರಾಕ್ಷಸಿಯೋ ಎಂದೆನಿಸದೇ ಇರಲಾರದು. ಹರಿಯಾಣದ ಫರೀದಾಬಾದ್ ಸೆಕ್ಟರ್ 17ರಲ್ಲಿ ಘಟನೆ ನಡೆದಿದೆ. ಜೂನ್ 17ರಂದು ನಡೆದ ಘಟನೆಯ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗಿದೆ.
ಮನೆಯ ಕಾರು ಚಾಲಕ ಬಂದು ಸುಮಾರು ಎಂಟರಿಂದ ಹತ್ತು ಬಾರಿ ನಿರಂತರವಾಗಿ ಬೆಲ್ ಮಾಡಿದ್ದಾರೆ. ಆಗ ನಾನು ಬಾಗಿಲು ತೆರೆದಿದ್ದೇನೆ. ಕೂಡಲೇ ಬಾಗಿಲ ಬಳಿ ಬಂದ ಮನೆಯ ಮಾಲಕಿ ದೀಪಾಲಿ ಜೈನ್ ನನ್ನ ಕೆನ್ನೆಗೆ ಸುಮಾರು ಎಂಟು ಸಲ ಹೊಡೆದು, ನೂಕಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಮನೆ ಕೆಲಸ ಮಾಡುವ ಶ್ಯಾಮ ದೇವಿ ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಹಲ್ಲೆ ಮಾಡಿದ ದೀಪಾಲಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
PublicNext
30/06/2025 06:58 pm