ಹೊನ್ನಾವರ : ಮಹಿಳೆಯ ಗೌಪ್ಯತೆ ಹಾಗೂ ಗೌರವಕ್ಕೆ ಧಕ್ಕೆ ತಂದಿರುವ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಮಹಿಳೆಯೊಬ್ಬರು ಸ್ನಾನ ಮಾಡುವ ವೇಳೆ ಇಣುಕಿ ನೋಡಲು ಹೋಗಿದ್ದ ಯುವಕನನ್ನ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಯೋಗೇಶ್ ಗೌಡ ಬಂಧಿತ ಆರೋಪಿಯಾಗಿದ್ದು, ಈತ ಹೊನ್ನಾವರ ತಾಲೂಕಿನ ಕೇಳಗಿನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಜಗಾರಿನ ಯುವಕನಾಗಿದ್ದಾನೆ. ಈತ ಶುಕ್ರವಾರ ರಾತ್ರಿ ಕೊಟ್ಟಿಗೆ ಮನೆಗೆ ತಾಗಿ ಬಚ್ಚಲು ಕೋಣೆಯ ಬಾಗಿಲು ತೆರೆಯುವ ಮೂಲಕ ಅಕ್ರಮ ಪ್ರವೇಶ ಮಾಡಿ, ಸ್ನಾನ ಮಾಡುತ್ತಿದ್ದ ಮಹಿಳೆಯತ್ತ ಇಣುಕಿ ನೋಡಿದ ಆರೋಪ ಎದುರಾಗಿತ್ತು. ಇದರಿಂದ ನೊಂದ ಮಹಿಳೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆ ದೂರಿನ ಮೇಲೆ ಪೊಲೀಸರು ಯುವನನ್ನ ಬಂಧಿಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ, ಈತನ ವಿರುದ್ಧ ಈ ಹಿಂದೆ ಸಹ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
Kshetra Samachara
29/06/2025 11:37 am