", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/41631820250630092248filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಿದ್ದಾಪುರ : ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಸಿದ್ದಾಪುರ ಬಿಜೆಪಿ ಮಂಡಲದ ವತಿಯಿಂದ ತಾಲೂಕಿನ 23 ಗ್ರಾಮ ಪಂಚಾಯತ್ ವ್ಯಾಪ...Read more" } ", "keywords": "Node", "url": "https://dashboard.publicnext.com/node" } ಸಿದ್ದಾಪುರ : ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ : ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

ಸಿದ್ದಾಪುರ : ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಸಿದ್ದಾಪುರ ಬಿಜೆಪಿ ಮಂಡಲದ ವತಿಯಿಂದ ತಾಲೂಕಿನ 23 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಿದ್ದಾಪುರ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ನೇತೃತ್ವದಲ್ಲಿ ಇಟಗಿ ಪಂಚಾಯತ್ ನಲ್ಲಿ  ಮನವಿ ಸಲ್ಲಿಸಿದರು.

 ಮನವಿ ಸಲ್ಲಿಕೆ ವೇಳೆ ಮಾತನಾಡಿದ ಎಂ ಕೆ ತಿಮ್ಮಪ್ಪ ಇಂದಿನ  ಜನಾಕ್ರೋಶ ಪ್ರತಿಭಟನೆ ನಡೆಸಲು ಕಾರಣ  ಕಾಂಗ್ರೆಸ್ ಪಕ್ಷದ ಶಾಸಕರಾಗಿರುವಂತಹ ಬಿ ಆರ್ ಪಾಟೀಲ್ ಹಾಗೂ ರಾಜು ಕಾಗೆಯವರು ಸರ್ಕಾರದಲ್ಲಿ ಬಹಳ  ಅವ್ಯವಹಾರ ನಡೆಯುತ್ತಿದೆ. ಇಂದಿರಾ ಆವಾಸ್, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆಗಳ ಹಂಚಿಕೆ ಯಲ್ಲಿ ಬಹಳ ಅವ್ಯವಹಾರ ಆಗಿದೆ ಎಂಬುದನ್ನು ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಆಡಳಿತ ಪಕ್ಷದ ಶಾಸಕರೇ ಬಹಿರಂಗಪಡಿಸಿರುವುದರಿಂದ, ಪಂಚಾಯತದಲ್ಲಿ ನಾವು ನೋಡುತ್ತಾ ಇರುವ ಹಾಗೆ ಪಂಚಾಯತ ವ್ಯವಸ್ಥೆಯು ಅದೇ ರೀತಿ ಆಗಿರುವುದರಿಂದ ನಮ್ಮ ರಾಜ್ಯದ ಅಧ್ಯಕ್ಷರು  ಮತ್ತು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ನಾವು ತಾಲೂಕಿನ 23 ಪಂಚಾಯತಿಗಳಲ್ಲಿ ನಾವು ಇವತ್ತು ಪಂಚಾಯತ್ದ ಎದುರುಗಡೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. 

ಅಭಿವೃದ್ಧಿಗೆ ಹಣ ಬರದೆ ಇರುವ ಕಾರಣದಿಂದ ಬಹಳ ಪಂಚಾಯಿತಗಳು ನಿಷ್ಕ್ರಿಯ ವಾಗುವಂತಹ ಸಂದರ್ಭ ಬಂದೊದಗಿದೆ, ಹಿಂದಿನ ಸರ್ಕಾರದಲ್ಲಿ ಮನೆ ಟ್ಯಾಕ್ಸ್ ಅನ್ನು ಪಂಚಾಯತ್ದವರೇ ನಿರ್ಧರಿಸುವಂತಹ ಅಧಿಕಾರವನ್ನು ಪಂಚಾಯತ್ದವರಿಗೆ ಕೊಟ್ಟಿತ್ತು ಆದರೆ ಈಗ ಹಾಗಲ್ಲ ಪಂಚಾಯತದ ಮನೆ ಟ್ಯಾಕ್ಸ್ ಅನ್ನು ಸರ್ಕಾರ ನಿರ್ಧಾರ ಮಾಡಿ ಕಳಿಸಿರುವುದರಿಂದ ಮನೆ ಟ್ಯಾಕ್ಸ್ ವಸೂಲಿಯಲ್ಲೂ ತೊಂದರೆಯಾಗಿದೆ. ಮನೆ ಟ್ಯಾಕ್ಸ್ ದರ ಬಹಳ ಹೆಚ್ಚಾಗಿರುವುದರಿಂದ ಜನ ಸಂಕಷ್ಟದಲ್ಲಿ ಇದ್ದಾರೆ. ಹಾಗಾಗಿ ನಾವು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಂಚಾಯತ್ದಲ್ಲಿ ಆಗುವ ವಿಚಾರಗಳನ್ನು ಜನರ ಮುಂದೆ ತರುವುದರ ಮುಖಾಂತರ ಇಂದಿನಿಂದಲೇ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದ ಅವರು 

 ಕಾಂಗ್ರೆಸ್  ಪಕ್ಷದ ಶಾಸಕರು ಈ ಸರ್ಕಾರಕ್ಕೆ ಭವಿಷ್ಯ ಇಲ್ಲ ಅಂತ ಹೇಳಿದ್ದಾರೆ.  ಪಂಚಾಯತದಲ್ಲಿ ಎರಡು ವರ್ಷದಿಂದ ಮನೆ ಹಂಚಿಕೆ ಆಗುತ್ತಾ ಇಲ್ಲ. ಬಿಜೆಪಿ ಸರ್ಕಾರ ಆಡಳಿತದಲ್ಲಿರುವಾಗ ಕೊಟ್ಟಂತಹ ಮನೆಗಳಿಗೆ ಬಿಲ್ ಆಗುತ್ತಾ ಇಲ್ಲ. ಮನೆ ನಂಬರ್ ಕೊಡಲಿಕ್ಕೆ ಬರುತ್ತಾ ಇಲ್ಲ.‌ ಮನೆ ನಂಬರ್ ಸಿಗುತ್ತಾ ಇಲ್ಲ. ಮನೆಗೆ ಕರೆಂಟ್ ತೆಗೆದುಕೊಳ್ಳೋಣ ಎಂದರೆ NOC ಸಿಕ್ತಾ ಇಲ್ಲ. ಇವೆಲ್ಲ ಈ ಸರ್ಕಾರದ ದೌರ್ಬಲ್ಯ .ಸರ್ಕಾರದ ದೌರ್ಬಲ್ಯವನ್ನು ಎತ್ತಿ ಹಿಡಿಯಬೇಕೆಂದು ನಾವು‌‌ ಪಂಚಾಯತ್ ಗಳಿ ಎದುರು ಪ್ರತಿಭಟನೆಯನ್ನು ಮಾಡುತ್ತಾ ಇದ್ದೇವೆ. 

ಇದರ ಜೊತೆಗೆ ಪಂಚಾಯತಕ್ಕೆ ರಾಜ್ಯ ಸರ್ಕಾರದಿಂದ ಬರಬೇಕಾದ ಯಾವುದೇ ರೀತಿಯ ಅನುದಾನ ಕಳೆದ ಎರಡು ವರ್ಷದಿಂದ ಬರುತ್ತಾ ಇಲ್ಲ. ಕೇಂದ್ರ ಸರ್ಕಾರದಿಂದ ಏನು ಅನುದಾನಗಳು ಬರುತ್ತವೆಯೋ ಅವು ಮಾತ್ರ ಪಂಚಾಯಿತಿಗಳಿಗೆ ಬರುತ್ತಿವೆ. ಬಿಟ್ಟರೆ ರಾಜ್ಯ ಸರ್ಕಾರದಿಂದ ಪಂಚಾಯತ್ಗಳಿಗೆ ಬರಬೇಕಾದ ಅನುದಾನ ಬರುತ್ತ ಇಲ್ಲ. ಇದರ ಜೊತೆಯಲ್ಲಿ ಬೇಸಿಗೆ ಕಾಲದಲ್ಲಿ ವಾಟರ್ ಸಪ್ಲೈ ನಿರ್ವಹಣೆಗೆ ರಾಜ್ಯ ಸರ್ಕಾರ ಹಣ ನೀಡಬೇಕಾಗಿತ್ತು ಆದರೆ ರಾಜ್ಯ ಸರ್ಕಾರ ಹಣ ನೀಡುತ್ತಾ ಇಲ್ಲ. ಮಳೆಗಾಲ ಬಂದ ತಕ್ಷಣ ರಸ್ತೆ ಸುಧಾರಣೆಗೆ ಹೊಂಡ ಮುಚ್ಚುವುದು ಮತ್ತು ನಿರ್ವಣೆಗೆ ಹಣ ಬರಬೇಕಾಗಿತ್ತು ಅದು ಈಗ ಬರುತ್ತಾ ಇಲ್ಲ. ಬೇಸಿಗೆಕಾಲದಲ್ಲಿ ಕುಡಿಯುವ ನೀರಿನ ಬಾವಿ ರಿಪೇರಿಗೆ ಹಣ ಬರುತ್ತಾ ಇತ್ತು ಅದು ಈಗ ಬರುತ್ತಾ ಇಲ್ಲ. ಪಂಚಾಯತದಲ್ಲಿ ಹಿಂದೆ ಬಂದಿರುವ ಮನೆಗಳಿಗೆ ಅವರದೇ ಶಾಸಕರು ಹೇಳಿರುವಂತೆ 15-20 ಸಾವಿರ ರೂಪಾಯಿ ಲಂಚ ಕೇಳುತ್ತಾ ಇದ್ದಾರೆ ಎಂದು  ಅವರದೇ ಪಕ್ಷದ ಶಾಸಕರು ಅವರ ಪಕ್ಷದ ಕಾರ್ಯಕರ್ತರ ಮೇಲೆ ಆಪಾದನೆ ಮಾಡಿದ್ದಾರೆ. ಇದು ಕೆಲವು ಪಂಚಾಯತಿಗಳಲ್ಲಿ ನಡೆಯಬಹುದು ಆದರೆ ಇವೆಲ್ಲಗಳನ್ನು ಇಟ್ಟುಕೊಂಡು ನಾವು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ನಾವೆಲ್ಲರೂ ಹಳ್ಳಿ ಹಳ್ಳಿಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ಪಿ ಡಬ್ಲ್ಯೂ ಡಿ ರಸ್ತೆಗಳು ಮತ್ತು ಪಂಚಾಯತ್ ರಸ್ತೆಗಳಲ್ಲಿ  ಓಡಾಡುವ ಪರಿಸ್ಥಿತಿ ಇಲ್ಲ ಪ್ರತಿ ರಸ್ತೆಗಳಲ್ಲೂ ಹೊಂಡಗಳಲ್ಲಿ ಗಿಡ ನೆಡುವುದರ ಮುಖಾಂತರ ಪಂಚಾಯತ ವ್ಯಾಪ್ತಿಯಲ್ಲಿ ಹೋರಾಟ ಮಾಡಬೇಕು  ಎಂದು ನಿರ್ಧಾರ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಆ ಹೋರಾಟವು ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ದಯಾನಂದ ಕಡಕೇರಿ, ರಮಾನಂದ ನಾಯ್ಕ್ ಹರಗಿ, ಪಾಂಡುರಂಗ ನಾಯ್ಕ್ ವಾಟಗಾರ್, ರಮಾನಂದ ಮಡಿವಾಳ ಬಿಳಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/06/2025 09:22 pm

Cinque Terre

940

Cinque Terre

0

ಸಂಬಂಧಿತ ಸುದ್ದಿ