", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1751272058-rav.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ : ಕೆಲವು ಶಾಸಕರಿಗೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ. ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತ ಆಸೆ ...Read more" } ", "keywords": "CM change not imminent, Karnataka government stable, high command support to government, RV Deshpande statement, Karnataka politics update, BJP Congress Karnataka.", "url": "https://dashboard.publicnext.com/node" } ಕಾರವಾರ: ಸಿಎಂ ಬದಲಾವಣೆ ಸದ್ಯಕ್ಕಿಲ್ಲ, ಸರ್ಕಾರಕ್ಕೆ ಹೈಕಮಾಂಡ್ ಬೆಂಬಲ ಇದೆ - ಆರ್.ವಿ.ದೇಶಪಾಂಡೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸಿಎಂ ಬದಲಾವಣೆ ಸದ್ಯಕ್ಕಿಲ್ಲ, ಸರ್ಕಾರಕ್ಕೆ ಹೈಕಮಾಂಡ್ ಬೆಂಬಲ ಇದೆ - ಆರ್.ವಿ.ದೇಶಪಾಂಡೆ

ಕಾರವಾರ : ಕೆಲವು ಶಾಸಕರಿಗೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ. ಕೆಲವು ಶಾಸಕರಿಗೆ ಮಂತ್ರಿ ಆಗಬೇಕು, ಅಧ್ಯಕ್ಷ ಆಗಬೇಕು ಅಂತ ಆಸೆ ಇರುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಇಂದು ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯನವರ ಸರ್ಕಾರಕ್ಕೆ ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ. ಕೆಲವು ಶಾಸಕರಿಗೆ ಸಮಸ್ಯೆ ಇರಬಹುದು ರಾಜ್ಯ ಉಸ್ತುವಾರಿ ಸುರ್ಜೆವಾಲಾರವರು ಕರೆದು ಸಮಸ್ಯೆ ಕೇಳುತ್ತಾರೆ.ಶಾಸಕರ ಸಮಸ್ಯೆ ಇದೆ ಅಂದ್ರೆ ಇಂದು ಸುರ್ಜೆವಾಲಾರವರು ಕರೆದು ಮಾತಾಡ್ತಾರೆ, ಎಲ್ಲವೂ ಸರಿ ಹೋಗುತ್ತದೆ. ಹಳೆ ಸಿದ್ದರಾಮಯ್ಯ ಈಗ ಹೇಗೆ ಇರೋಕೆ ಸಾಧ್ಯ..? ಮೊದಲು ಸಿದ್ದರಾಮಯ್ಯ ಯಂಗ್ ಇದ್ದ, ಸ್ವಲ್ಪ ಶಕ್ತಿ ಜಾಸ್ತಿ ಇತ್ತು. ಈಗ ನಾನೇ ನೋಡಿ ಮೊದಲು ಇದ್ದ ದೇಶಪಾಂಡೆ ಈಗ ಇದೀನಾ.? ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ಸಾಮರ್ಥ್ಯದ ಕುರಿತು ಟಾಂಗ್ ನೀಡಿದ ಅವರು ಆಡಳಿತದಲ್ಲಿ ಎಲ್ಲಾ ನಿರ್ಧಾರ ಶಾಸಕರಿಗೆ ಹೇಳಿ ಮಾಡೋಕೆ ಆಗುವುದಿಲ್ಲ, ಸಿದ್ದರಾಮಯ್ಯಗೆ ತಾಳ್ಮೆ ಬಹಳ ಇದೆ ಎಂದರು.

Edited By : Manjunath H D
PublicNext

PublicNext

30/06/2025 01:57 pm

Cinque Terre

9.69 K

Cinque Terre

0

ಸಂಬಂಧಿತ ಸುದ್ದಿ